This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಬೆಳಗಾವಿ – ಚಿಕ್ಕೋಡಿ: ಪದವೀಧರರ ಶಿಕ್ಷಕರ ದಾಖಲಾತಿ ಪರಿಶೀಲನೆ ಯಾವಾಗ? ಎಲ್ಲಿ? Belgaum - Chikkodi: enrollment verification of graduate teachers Details


ಜನಜೀವಾಳ ಜಾಲ ಬೆಳಗಾವಿ: ಬೆಳಗಾವಿ/ಚಿಕ್ಕೋಡಿ :  ಶೈಕ್ಷಣಿಕ ಜಿಲ್ಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಿಕ್ಷಕ ( 6-8 ) ವೃಂದದ ನೇಮಕಾತಿಗಾಗಿ ದಿನಾಂಕ : 28.09.2022 ರಂದು 1 : 2 ರಂತೆ ಆಯ್ಕೆ ಪಟ್ಟಿ ಪ್ರಕಟಿಸಿದ್ದು , ಪರಿಶೀಲನಾ ವೇಳಾ ಪಟ್ಟಿಯನ್ನು ಮಾನ್ಯ ವಿಶೇಷಾಧಿಕಾರಿಗಳು ಕೇಂದ್ರೀಕೃತ ದಾಖಲಾತಿ ಘಟಕ ಬೆಂಗಳೂರು ರವರು ಹೊರಡಿಸಿದ್ದು ಇರುತ್ತದೆ .

ಅದರಂತೆ ಜಿಲ್ಲಾ ಮಟ್ಟದ ದಾಖಲೆಗಳ ಪರಿಶೀಲನೆಯನ್ನು ದಿನಾಂಕ : 06.10.2022 ರಿಂದ 15.10.2022 ರವರೆಗೆ “ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢ ಶಾಲೆ ಪಾಟೀಲ ಗಲ್ಲಿ ಬೆಳಗಾವಿ ” ಇಲ್ಲಿ ಆಯೋಜಿಸಿದ್ದು ಇರುತ್ತದೆ .ಚಿಕ್ಕೋಡಿಯ ದಾಖಲಾತಿ ಪರಿಶೀಲನೆ “ಉಪನಿರ್ದೇಶಕರ ಕಚೇರಿಯ ಹಾಲ್ ”  ನಲ್ಲಿ ಜರುಗಲಿದೆ .

ಕಾರಣ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಯೊಂದಿಗೆ ಮತ್ತು ಎರಡು ಪ್ರತಿ ದೃಢೀಕೃತ ಝರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಲು ತಿಳಿಸಿದೆ . ಹಾಗೂ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಈ ಕಛೇರಿಯಲ್ಲಿ ಸ್ವೀಕರಿಸಲಾಗುವುದು . ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ನೋಡಲ್ / ಸಹಾಯಕ ಅಧಿಕಾರಿಗಳಾದ ಶ್ರೀ ಸುಜಾತ ಬಾಳೆಕುಂದ್ರಿ -9980251756 , ಶ್ರೀಮತಿ ಎಮ್.ಎಮ್.ಪಾಟೀಲ -9449088174 ಮತ್ತು ಶ್ರೀಮತಿ ಶ್ರೀದೇವಿ ಎಸ್ ನಾಗನೂರ -8147090233 ಇವರನ್ನು ಸಂಪರ್ಕಿಸಲು ತಿಳಿಸಿದೆ ಎಂದು ಬಸವರಾಜ ನಾಲತವಾಡ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ( ದ )  ಹಾಗೂ ಚಿಕ್ಕೋಡಿ ಉಪ ನಿರ್ದೇಶಕ ಮೋಹನ್ ಕುಮಾರ್ ಹಂಚಾಟಿ “ಜನಜೀವಾಳ ” ಕ್ಕೆ ತಿಳಿಸಿದ್ದಾರೆ.

 


Jana Jeevala
the authorJana Jeevala

Leave a Reply