ಬೆಳಗಾವಿ ಬಾಲಕ ಕಿತವಾಡ ಪಾಲ್ಸ್ ನಲ್ಲಿ ನೀರುಪಾಲು..!
ಪರೀಕ್ಷೆ ಮುಗಿಸಿ ಮೋಜು ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿಧ್ಯಾರ್ಥಿ..!
ಮುಗಿಲು ಮುಟ್ಟಿದ ಗೆಳೆಯರ ಆಕ್ರಂದನ.
ಜನ ಜೀವಾಳ : ಬೆಳಗಾವಿ : 10 ನೇ (CBSC) ತರಗತಿಯ ಪರೀಕ್ಷೆ ಮುಗಿಸಿದ ಖುಷಿಯಲ್ಲಿ ತನ್ನ ಗೆಳೆಯರೆಲ್ಲರನ್ನು ಕರೆದುಕೊಂಡು ಬೆಳಗಾವಿ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಕಿತವಾಡ ಪಾಲ್ಸ್ ನಲ್ಲಿ ಮೋಜು ಮಾಡಲು ಹೋಗಿದ್ದ ಬೆಳಗಾವಿ ಹೈಸ್ಕೂಲ್ ವಿದ್ಯಾರ್ಥಿ ನೀರುಪಾಲಾಗಿದ್ದಾನೆ.
ಬೆಳಗಾವಿ ಅಜಮ್ ನಗರ ನಿವಾಸಿ ಹಾಗೂ ಲವಡೇಲ್ ಸ್ಕೂಲ್ ನ ವಿದ್ಯಾರ್ಥಿ ಉಜೈಪ್ ಮುಜಾವರ ಸಾವನಪ್ಪಿರುವ ಬಾಲಕ.
ಆಗಿದ್ದೇನು..?
ನಿನ್ನೆ ಅಷ್ಟೇ ಉಜೈಪ್ ತನ್ನ SSLC ಪರೀಕ್ಷೆ ಮುಗಿಸಿದ್ದಾನೆ. ಅದೆ ಖುಷಿಯಲ್ಲಿ ಮೋಜು ಮಾಡಲು 14 ಗೆಳೆಯರು ಕೂಡಿಕೊಂಡು ಕಿತವಾಡ ಪಾಲ್ಸ್ ಗೆ ಹೋಗಿದ್ದಾರೆ. ಆಗ ಡ್ಯಾಮಿನ ಹಿನ್ನೀರಿನಲ್ಲಿ ಉಜೈಪ್ ಈಜಲು ಹೋಗಿದ್ದಾನೆ. ಈಜುವಾಗ ಗೆಳೆಯರಿಗೆ ಮುಳುಗಿದ ಹಾಗೆ ಎರಡು ಬಾರಿ ನಕಲಿ ಮಾಡಿಸಿ ತೋರಿಸಿದ್ದಾನೆ. ಇದನ್ನು ನೋಡಿದ ಸ್ನೇಹಿತರು ಈಜುವುದು ಬೇಡ ಹೋಗೋಣ ಬಾ ಎಂದಿದ್ದಾರೆ. ಆದರೆ ಆತ ಬಾರದೆ ಮತ್ತೆ ಅದೆ ರೀತಿ ನಕಲಿ ಮಾಡಲು ಹೋದಾಗ ನೀರಿನಲ್ಲಿ ಮುಳುಗಿದವ ಮೇಲೆ ಬಂದೆ ಇಲ್ಲ. ಆಗ ಭಯಭೀತಗೊಂಡ ಬಾಲಕರು ಕಿರುಚುವುದನ್ನು ಕಂಡು ಓಡಿ ಬಂದ ಸ್ಥಳಿಯರು ಉಜೈಪ್ ನನ್ನು ಹುಡುಕಲು ಪ್ರಯತ್ನಿಸಿದರು ಸಿಕ್ಕಿಲ್ಲ.
ಮೃತ ದೇಹಕ್ಕಾಗಿ ರಾತ್ರಿಯಿಡೀ ನಡೆದ ಕಾರ್ಯಾಚರಣೆ ..!
ನೀರುಪಾಲಾಗಿರುವ ಬಾಲಕನ ಮೃತದೇಹಕ್ಕಾಗಿ ಬೆಳಗಾವಿ NDRF ತಂಡ ಕಾರ್ಯಾಚರಣೆ ನಡೆಸಿದರೂ ಇನ್ನೂ ಸಿಕ್ಕಿಲ್ಲ. ಸ್ನೇಹಿತನ ಸಾವು ಕಣ್ಮುಂದೆ ಕಂಡಿರುವ ಬಾಲಕರು ರಾತ್ರಿಯಿಡೀ ಅವರ ಕುಟುಂಬದವರೊಂದಿಗೆ ಉಜೈಪ್ ನ ಮೃತದೇಹಕ್ಕಾಗಿ ಸ್ಥಳದಲ್ಲೇ ಕಾದು ಕುಳಿತಿದ್ದಾರೆ.