ದೆಹಲಿ :ಪ್ರತಿಷ್ಠಿತ ಇಂಡಿಯಾ ಟುಡೇ ನಡೆಸಿದ ಬೆಸ್ಟ್ ಕಾಲೇಜ್ ಆಫ್ ಇಂಡಿಯಾ ಪಟ್ಟಿಯಲ್ಲಿ ಬೆಳಗಾವಿಯ ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಬೀಮ್ಸ್) ಸ್ಥಾನ ಗಿಟ್ಟಿಸಿಕೊಂಡಿದೆ. ಇದು ಬೆಳಗಾವಿ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.
ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯಲ್ಲಿ
ಬೆಳಗಾವಿಯ ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂಟನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯ ಮೊದಲ 10 ಸ್ಥಾನಗಳಲ್ಲಿ ಬೆಳಗಾವಿಯ ಬೀಮ್ಸ್ ಹೊರತುಪಡಿಸಿ ಕರ್ನಾಟಕದ ಯಾವೊಂದು ವೈದ್ಯಕೀಯ ಮಹಾವಿದ್ಯಾಲಯಗಳು ಸ್ಥಾನ ಪಡೆದಿಲ್ಲ.
ಬೆಳಗಾವಿ ಬೀಮ್ಸ್ ಕಳೆದ ಒಂದೂವರೆ ದಶಕದಿಂದ ಅಳವಡಿಸಿಕೊಂಡಿರುವ ವ್ಯವಸ್ಥೆಗಳನ್ನು ಪರಿಗಣಿಸಿ ಇಂಡಿಯಾ ಟುಡೇ ಅತ್ಯುತ್ತಮ ಕಾಲೇಜು ಎಂದು ಪರಿಗಣಿಸಿದೆ.
ಇಂಡಿಯಾ ಟುಡೇ ದೇಶದ ಅತ್ಯುತ್ತಮ ವ್ಯವಸ್ಥೆ ಅಳವಡಿಸಿಕೊಂಡಿರುವ ಮಹಾವಿದ್ಯಾಲಯಗಳ ಸಮೀಕ್ಷೆ ನಡೆಸಿದೆ. ಎಲ್ಲಾ ವೈದ್ಯಕೀಯ ಕಾಲೇಜು ಅಳವಡಿಸಿಕೊಂಡಿರುವ ಎಲ್ಲಾ ವ್ಯವಸ್ಥೆಗಳನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸುತ್ತದೆ. ಅದರ ಆಧಾರದ ಮೇಲೆ ಬೆಳಗಾವಿಯ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಈ ಸ್ಥಾನ ಲಭಿಸಿದೆ. ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯದ ಎಲ್ಲಾ ವ್ಯವಸ್ಥೆಗಳನ್ನು ಗಮನಿಸಿ ಇಂಡಿಯಾ ಟುಡೇ ತನ್ನ ಸಮೀಕ್ಷೆಯಲ್ಲಿ ಬೆಳಗಾವಿ ಮಹಾವಿದ್ಯಾಲಯಕ್ಕೆ ಎಂಟನೇ ಸ್ಥಾನ ನೀಡಿದೆ. ಇದು ನಮಗೆ ಅತ್ಯಂತ ಹೆಮ್ಮೆ ತಂದಿದೆ ಎಂದು ಮಹಾ ವಿದ್ಯಾಲಯದ ಬೀಮ್ಸ್ ನಿರ್ದೇಶಕ ಡಾ.ಅಶೋಕ ಶೆಟ್ಟಿ ಅವರು ಜನಜೀವಾಳಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸರ್ವೆ : ಬೆಸ್ಟ್ ಕಾಲೇಜ್ ಆಫ್ ಇಂಡಿಯಾ ಪಟ್ಟಿಯಲ್ಲಿ ಬೆಳಗಾವಿ BIMS
