ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ
Accessing Extra-Mural Funding for Research and Teaching ಕುರಿತು
ಒಂದು ದಿನದ ರಾಷ್ಟ್ರೀಯ ಸಿಂಪೋಜಿಯಮ್ ಆಯೋಜಿಸಲಾಗಿತ್ತು.
ಭಾರತೀಯ ವಿಜ್ಞಾನಿ ಮತ್ತು ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ವೀರೇಂದ್ರ ಸಿಂಗ್ ಚೌವ್ಹಾಣ್, ಗೌರವಾನ್ವಿತ ಪ್ರಾಧ್ಯಾಪಕರು,ದಿಲ್ಲಿ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್, ನವದೆಹಲಿ, ಅವರು ಅಧ್ಯಾಪಕರು ಸಂಶೋಧನೆಯಲ್ಲಿ ಆಸಕ್ತಿವಹಿಸಿ ಜ್ಞಾನ ಸೃಷ್ಠಿಮಾಡುವ ಕಾರ್ಯದಲ್ಲಿ ಭಾಗಿಯಾಗಬೇಕು. ಸೃಷ್ಟಿಸಿದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಲುಪಿಸಿದರೆ ರಾಷ್ಟ್ರದ ಏಳ್ಗಿಗೆ ಕಾರಣವಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗೂ ದೇಶದ ಆರ್ಥಿಕ ಸ್ಥಿತಿಗೂ ನೇರ ಸಂಬಂಧವಿರುವುದನ್ನು ಮುಂದುವರೆದ ರಾಷ್ಟ್ರಗಳಿಂದ ತಿಳಿಯಬಹುದು ಎಂದು ಆಶಯ ಭಾಷಣಮಾಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ರಾಮಚಂದ್ರ ಗೌಡ, ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಬೋಧನೆ-ಕಲಿಕೆಯಲ್ಲಿನ ಮಾದರಿ ಬದಲಾವಣೆಯೊಂದಿಗೆ ಸಂಶೋಧನೆಯ ಜೋಡಣೆಯು ಉನ್ನತ ಶಿಕ್ಷಣ ಸಂಸ್ಥೆಗಳ ಅತ್ಯಗತ್ಯ ಭಾಗವಾಗಿದೆ ಎಂದು ಹೇಳಿದರು.
ಅಂತಹ ವಿಷಯದ ಮೇಲಿನ ರ್ಚೆಗಳು ಭಾರತ ಮತ್ತು ವಿದೇಶಗಳಲ್ಲಿನ ಸಂಶೋಧನೆ ಬದಲಾವಣೆ ಏಳಿಗೆ ಮಾಡಲು ಸಂಶೋಧಕರನ್ನು ಓರಿಯಂಟ್ ಮಾಡುತ್ತದೆಯೆಂದು ಅವರು ಹೇಳಿದರು.
ಪ್ರೊ. ವಿಭಾಸಿಂಗ್ ಚೌಹ್ವಾಣ್, ಮಾಜಿ ಪ್ರಾಂಶುಪಾಲರು, ಕಿರೋರಿ ಮಾಲ್ ಕಾಲೇಜು, ದೆಹಲಿ ವಿಶ್ವವಿದ್ಯಾಲಯ, ದೆಹಲಿ, ಶ್ರೀಮತಿ. ರಾಜಶ್ರೀ ಜೈನಾಪುರ, ಕುಲಸಚಿವರು, ಪ್ರೊ. ಶಿವಾನಂದ ಎಸ್. ಗೊರನಾಳೆ, ಕುಲಸಚಿವರು(ಮೌಲ್ಯಮಾಪನ) ಮತ್ತು ಪ್ರೊ. ಎಸ್.ಬಿ. ಆಕಾಶ್, ಹಣಕಾಸು ಅಧಿಕಾರಿಗಳು ವಿಚಾರ ಸಂಕೀರಣದಲ್ಲಿ ಗೌರವ ಅತಿಥಿಗಳಾಗಿದ್ದರು.
ವಿಚಾರ ಸಂಕೀರಣದ ಸಂಚಾಲಕರು ಡಾ. ಸುಮಂತ್ ಎಸ್. ಹಿರೇಮಠ ಅವರು ತಮ್ಮ ‘ಪ್ರಾಸ್ತಾವಿಕನುಡಿ’ಯಲ್ಲಿ ವಿಚಾರ ಸಂಕೀರಣದ ಕುರಿತು ಹಾಗೂ ಪ್ರಸ್ತುತ ಸನ್ನಿವೇಶದಲ್ಲಿ ಸಂಶೋಧನೆಯ ಅಗತ್ಯ ಕುರಿತು ವಿವರಿಸಿದರು.
ಆಂಗ್ಲ ವಿಭಾಗದ ಅಧ್ಯಕ್ಷೆ ಡಾ. ನಾಗರತ್ನ ವಿ. ಪರಾಂಡೆ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಕೆ. ಕಾಂತರಾಜು ಅತಿಥಿಗಳನ್ನು ಪರಿಚಯಿಸಿದರು. ಅನ್ನಪೂರ್ಣ ಸ್ವಾಗತಿಸಿದರು. ಡಾ. ದೇವತಾ ಗಸ್ತಿ, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ವಂದಿಸಿದರು. ಐಶ್ವರ್ಯಾಪಾಟೀಲ ನಿರೂಪಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಲ್ಲಾ ಅಧ್ಯಾಪಕರು, ಪಿಎಚ್.ಡಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಶೋಧನಾ ಪ್ರಸ್ತಾವಣೆಗಳ ಮೌಲ್ಯಮಾಪನ
ಪ್ರೊ. ವಿಭಾ ಸಿಂಗ್ ಚಹ್ವಾಣ್ ಅವರು ಸಮಾಜ ವಿಜ್ಞಾನಗಳ ಅಧ್ಯಾಪಕರು ರಚಿಸಿದ ಮಾದರಿ ಸಂಶೋಧನಾ ಪ್ರಸ್ತಾವನೆಗಳನ್ನು ಮತ್ತು ಪ್ರೊ. ವೀರೇಂದ್ರ ಸಿಂಗ್ ಚೌಹ್ವಾಣ್ ಅವರು ವಿಜ್ಞಾನ ಮತ್ತು ಕಂಪ್ಯೂಟರ್ ಜ್ಞಾನಗಳ ವಿಭಾಗದಿಂದ ರಚಿಸಲಾದ ಮಾದರಿ ಸಂಶೋಧನಾ ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡಿದರು.