ಬೆಳಗಾವಿ : ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬ್ಯಾಟರಿ ಚಾಲಿತ ವಾಹನ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬ್ಯಾಟರಿ ಚಾಲಿತ ವಾಹನ ಸೇವೆಯಿಂದ ಗರ್ಭಿಣಿಯರು, ಅನಾರೋಗ್ಯ ಪೀಡಿತರು, ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಬುಕಿಂಗ್ ಸಂದರ್ಭದಲ್ಲಿ ಅವರಿಗೆ ಆದ್ಯತೆ ನೀಡಲಾಗುವುದು ಎಂದು ಹುಬ್ಬಳ್ಳಿ ವಿಭಾಗಿಯ ರೈಲ್ವೆ ವ್ಯವಸ್ಥೆ ವ್ಯವಸ್ಥಾಪಕ ಹರ್ಷ ಖರೆ ತಿಳಿಸಿದ್ದಾರೆ. ವಾಣಿಜ್ಯ ವ್ಯವಸ್ಥಾಪಕ ವಿಭಾಗಿಯ ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಸಂತೋಷ ಹೆಗಡೆ ಮಾತನಾಡಿ, 5 ಜನರ ಸಾಮರ್ಥ್ಯ ಹೊಂದಿರುವ ಈ ಬ್ಯಾಟರಿ ಚಾಲಿತ ತೆರೆದ ಕಾರು 450 ಕೆಜಿ ಸಾಮರ್ಥ್ಯ ಹೊಂದಿದೆ. ಪ್ರತಿ ಪ್ರಯಾಣಿಕರು 10 ಕೆಜಿ ಲಗೇಜ್ ತೆಗೆದುಕೊಂಡು ಹೋಗಲು ಅವಕಾಶ ಇದೆ. ರೂ. 20 ಶುಲ್ಕ ಸಂದಾಯ ಮಾಡಬೇಕು. ರೈಲ್ವೆ ಪ್ರಯಾಣಿಕರು ಇದರ ಅನುಕೂಲಕ್ಕೆ ಮೊ:8971048869 ಇಲ್ಲಿಗೆ ಸಂಪರ್ಕಿಸಬಹುದು.
ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಬ್ಯಾಟರಿ ಚಾಲಿತ ಕಾರು
