ಏಳೂವರೆ ದಶಕಗಳ ಹಿಂದೆ ಬೆಳಗಾವಿಯಲ್ಲಿ ‘ಜನ ಜೀವಾಳ’ದ ಸಂಸ್ಥಾಪಕ ಸಂಪಾದಕರಾಗಿ ತಮ್ಮ ನೇರ-ನಿರ್ಭೀತ ಪತ್ರಿಕೋದ್ಯಮದ ಮೂಲಕ ಹೆಸರು ಮಾಡಿದ್ದ ಬ.ಮ.ಏಳುಕೋಟಿ ಪತ್ರಿಕೆಯ ಜೊತೆಗೆ 1980 ರಲ್ಲಿ ಜನಸಾಹಿತ್ಯ ಪೀಠವನ್ನು ಅಸ್ತಿತ್ವಕ್ಕೆ ತಂದಿದ್ದರು. ಅವರ ಕನಸಿನಂತೆ ನಾಲ್ಕು ದಶಕಗಳಿಂದ ಈ ಸಂಘಟನೆ ಸಾಹಿತ್ಯ, ನಾಡು-ನುಡಿಗಾಗಿ ಗಣನೀಯ ಸೇವೆ ಸಲ್ಲಿಸುತ್ತಿದೆ. ಈಗ ನೂತನ ಅಧ್ಯಕ್ಷರ ನೇಮಕವಾಗಿದೆ.
– ಸಂಪಾದಕ
ಜನ ಜೀವಾಳ ಜಾಲ : ಬೆಳಗಾವಿ :
ಜನ ಸಾಹಿತ್ಯ ಪೀಠದ ನೂತನ ಅಧ್ಯಕ್ಷರಾಗಿ ಬಸವರಾಜ ಗಾರ್ಗಿ ಅವರನ್ನು ನೇಮಕ ಮಾಡಲಾಗಿದೆ. 1980 ರಿಂದ
ಇದುವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಪತ್ರಕರ್ತ, ನಿವೃತ್ತ ಮುಖ್ಯೋಪಾಧ್ಯಾಯ ಪುಂಡಲೀಕ ಪಾಟೀಲ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಹಾಗೂ ಸಾಹಿತ್ಯ ಪರಿಚಾರಕರಾಗಿ ತೆರೆಮರೆಯಲ್ಲಿ ಸೇವೆ ಸಲ್ಲಿಸಿದ್ದ ಬಸವರಾಜ ಗಾರ್ಗಿ ಅವರನ್ನು ನೇಮಕ ಮಾಡುವ ಮೂಲಕ ಸಂಘಟನೆಗೆ ಮತ್ತಷ್ಟು ಬಲ ನೀಡುವ ಕೆಲಸ ಮಾಡಲಾಗಿದೆ.
ಸಮಾಜಮುಖಿ ಸೇವೆ: ಬಸವರಾಜ ಗಾರ್ಗಿ ಬಿ.ಕಾಂ. (ಗುಲಬರ್ಗಾ), ಬಿ.ಎ. (ಅರ್ಥಶಾಸ್ತ್ರ, ಧಾರವಾಡ), ಬಿ.ಎ. – 2 (ಇಂಗ್ಲೀಷ್, ಧಾರವಾಡ), ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 31-5-2022 ರಲ್ಲಿ ನಿವೃತ್ತಿ ಹೊಂದಿದರು.
ಕೃತಿಗಳು : ನಾವೂ ಬರೆಯುತ್ತೇವೆ (ಕವನ ಸಂಕಲನ), ಭಾವ ಸಂಗಮ (ಚುಟುಕು ಸಂಕಲನ), ನಿನ್ನೊಳಗಿನ ಸೂರ್ಯ(ಕವನ ಸಂಕಲನ), ಸಂಗತಿಯಾದ ಕಥೆಗಳು (ಕಥಾ ಸಂಕಲನ), ರಿಪೇರಿ ಆದಾವೇನಿ (ಮಕ್ಕಳ ನಾಟಕ), ಶ್ರಮದ ಸ್ವರ್ಗ (ಮಕ್ಕಳ ಕಥೆಗಳು), ಕನ್ನಡ ಡಿಂಡಿಮ(ಸಂಪಾದಿತ), ಹಾಸ್ಟೆಲ್ ಮಕ್ಕಳ ಕಥೆಗಳು
ಕನ್ನಡದ ಸೇವೆ :ಗುಬ್ಬಚ್ಚಿ ಗೂಡು ಮಕ್ಕಳ ಪತ್ರಿಕೆ ಸಂಪಾದಕ ಮಂಡಳಿಯಲ್ಲಿ ಒಬ್ಬರು. ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿಯ ರಾಜ್ಯ ಸದಸ್ಯರಾಗಿ ಒಂದಿಷ್ಟು ಕಾರ್ಯನಿರ್ವಹಣೆ, ಭರತಲಾಲ್ ಮೀನಾರ ಅಪ್ನಾ ದೇಶ ಸಂಘಟನೆಯಲ್ಲಿ ಒಂದಿಷ್ಟು ಸಮಾಜಮುಖಿ ಕೆಲಸ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ತಾಲೂಕು ಮತ್ತು ಜಿಲ್ಲಾ ಘಟಕಗಳ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆಯಲ್ಲಿ ಪದಾಧಿಕಾರಿಯಾಗಿ ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ & ಕನ್ನಡ ಸಾಹಿತ್ಯ ಪರಿಷತ್ತುಗಳು ಆಜೀವ ಸದಸ್ಯ, ಅಧ್ಯಕ್ಷ ಬ್ರಹ್ಮಪುರಿ ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ಬಳ್ಳಿ ಜಿ:ಧಾರವಾಡ ಅಧ್ಯಕ್ಷ ರಾಷ್ಟ್ರಕೂಟ ಪ್ರತಿಷ್ಠಾನ ಬೆಳಗಾವಿ, ಸಂಚಾಲಕ, ಜಿಲ್ಲಾ ಮಕ್ಕಳ ಸಾಹಿತಿಗಳ ಸಂಘ ಬೆಳಗಾವಿ.
ಪ್ರಶಸ್ತಿ ಗೌರವಗಳು: ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಶಿಕ್ಷಣ ಸಿರಿ(ರಾಜ್ಯ ಪ್ರಶಸ್ತಿ) ಚುಟುಕು ಶ್ರೀ (ರಾಜ್ಯಪ್ರಶಸ್ತಿ), ದಿ.ಬೆಸ್ಟ್ ಹಿಸ್ಟಾರಿಕ್ ಟ್ಯಾಲೆಂಟರ್, ದಿ. ಬೆಸ್ಟ್ ಕಲ್ಟರಲ್ ವರ್ಕರ್ ಗುರುಕುಲ ರಾಜ್ಯ ಪ್ರಶಸ್ತಿ, ಕರುನಾಡ ಜ್ಯೋತಿ ರಾಜ್ಯ ಪ್ರಶಸ್ತಿ, ನೃಪತುಂಗ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ, (ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ನವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಅವಿಸ್ಮರಣೀಯ ಘಟನೆ) ಬಸವಚೇತನ ರಾಜ್ಯ ಪ್ರಶಸ್ತಿ, ಸದ್ಗುರು ಕಾಯಕ ಶ್ರೀ ರಾಜ್ಯ ಪ್ರಶಸ್ತಿ, ಆಪ್ನಾ ದೇಶ ಧಾರವಾಡದ ಶ್ರಮಿಕ ರತ್ನ ಪ್ರಶಸ್ತಿ, ಸಿರಿಗನ್ನಡ ಸಾಹಿತ್ಯಶ್ರೀ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ.
ಮಕ್ಕಳ ಕ್ಷೇತ್ರ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ, ಗುಬ್ಬಚ್ಚಿ ಗೂಡು ಮಕ್ಕಳ ಪತ್ರಿಕೆ ಸಂಪಾದಕ ಬಳಗ, ರಾಜ್ಯ ಮಟ್ಟದ ಅಖಿಲ ಕರ್ನಾಟಕ ಮಕ್ಕಳ
ಸಾಹಿತ್ಯ & ಸಾಂಸ್ಕೃತಿಕ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ಸಕ್ರೀಯ, ಆಲೆಮಾರಿ & ವಿಶೇಷ ಚೇತನ ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಮಕ್ಕಳ ಹಕ್ಕುಗಳ ಅರಿವು ಹಾಗೂ ಮಾರ್ಗದರ್ಶನ 1985 ರಿಂದ ಇಲ್ಲಿಯವರೆಗೆ.
ವಿಳಾಸ : ಹೊಂಗನಸು, ಪ್ಲಾಟ್ ಸಂಖ್ಯೆ 73, ರಾಣಿ ಚನ್ನಮ್ಮ ಹೌಸಿಂಗ್ ಸೊಸೈಟಿ, ಶ್ರೀನಗರ, ಬೆಳಗಾವಿ – 5900016 ದೂರವಾಣಿ ಸಂಖ್ಯೆ: 8453500025 / 8762889099