ಬೆಳಗಾವಿ:
ಇತ್ತೀಚೆಗೆ ವಿಜಯಪುರದಲ್ಲಿ, ಜನವರಿ 8 ರಂದು ನಡೆದ “ಬಸವ ಜನ್ಮಭೂಮಿ ಪ್ರತಿಷ್ಠಾನ”, ಬ.ಬಾಗೇವಾಡಿ, ಜಿಲ್ಲಾ ಘಟಕ ವಿಜಯಪುರ,ಅವರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಅವರಿಗೆ ಪ್ರತಿಷ್ಠಿತ “ಬಸವಭೂಷಣ” ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತು.
ಬಸವ ಜನ್ಮಭೂಮಿ ಪ್ರತಿಷ್ಠಾನ,ಬ.ಬಾಗೇವಾಡಿ, ಜಿಲ್ಲಾ ಘಟಕ ವಿಜಯಪುರ,ಅವರ ವತಿಯಿಂದ ನಡೆದ ರಾಜ್ಯಮಟ್ಟದ ವಚನ ವೈಭವ,ಮತ್ತು ಬಸವಭೂ ಷನ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಡಾ.ಹೊಸಮನಿ ಅವರು,ಸಾಹಿತ್ಯದ ವಿವಿಧ ಆಯಾಮಗಳ ಕುರಿತು ಮಾತನಾಡಿದರು. ಡಿಜಿಟಲ್ ಗ್ರಂಥಾಲಯದ ಬಗ್ಗೆ,ನೋಂದಣಿ ಪ್ರಕ್ರಿಯೆ ಮತ್ತು ಅಳವಡಿಸಲಾದ ಪುಸ್ತಕಗಳು,ವಿಷಯಗಳು, ಇನ್ನಿತರ ಮಾಹಿತಿ ನೀಡಿದರು.
ಪ.ಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ ಅವರನ್ನು ನೆನೆದು, ಈ ಮನುಕುಲಕ್ಕೆ ಅವರ ಸಂದೇಶಗಳು ಎಷ್ಟು ಪ್ರಸ್ತುತ ಎಂದು ನೆನೆಸಿಕೊಂಡರು. ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಾನಿಧ್ಯವನ್ನು ಪ. ಪೂ.ಜಗದ್ಗುರು ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ವೀರಶೈವ ಲಿಂಗಾಯತ ಮಂಚಮಸಾಲಿ ಪೀಠ, ಅಲಗೂರ,ಜಮಖಂಡಿ ವಹಿಸಿದ್ದರು. ಪ್ರತಿಷ್ಠಾನದ ಸಂಚಾಲಕ ಡಾ.ಮುರಗೇಶ ಸಂಗಮ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.