ಬೆಳಗಾವಿ : ಬೆಂಗಳೂರಿನ ಜಿಟಿ ಮಾಲ್ ಗೆ ರೈತರೊಬ್ಬರು ಪಂಚೆ ಉಟ್ಟುಕೊಂಡು ಹೋದ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಅದರಲ್ಲೂ ಅಥಣಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾಲ್, ರೈತನ ವಿರುದ್ಧ ತೆಗೆದುಕೊಂಡ ಧೋರಣೆಗೆ ಕೆಂಡಮಂಡಲಗೊಂಡರು. ವಿಧಾನಸಭೆಯಲ್ಲಿ ಮಾಲ್ ತೆಗೆದುಕೊಂಡ ನಿರ್ಧಾರವನ್ನು ಖಂಡನೆ ಮಾಡಿದರೆ ಸರಿಹೋಗಲಿಕ್ಕಿಲ್ಲ. ಸರಕಾರದಿಂದ ನೀವೊಂದು ಆದೇಶ ಹೊರಡಿಸಿ. ತಕ್ಷಣ ಮಾಲಿನ ಪವರ್ ಕಟ್ ಮಾಡಿಸಿ. ಒಂದು ವಾರದ ಮಟ್ಟಿಗಾದರೂ ಈ ಬಗ್ಗೆ ಸೂಚನೆ ನೀಡಿ. ಆಗ ಅವರಿಗೆ ಒಂದು ತಕ್ಕ ಪಾಠ ಕಲಿಸಿದಂತಾಗುತ್ತದೆ. ರಿಸ್ಟ್ರಿಕ್ಟ್ ಮಾಡಿ ಸೂಟ್ ಬೂಟ್ ಹಾಕಿಕೊಂಡು ಬರಬೇಕು ಎಂದರೆ ಇದೇನು ಅಮೆರಿಕ ಅಲ್ಲ, ಅಮೆರಿಕದಲ್ಲಿ ಹೋಗಿ ಮಾಲ್ ಕಟ್ಟಲಿ. ಈ ಕೂಡಲೇ ಸರಕಾರ ಪವರ್ ಕಟ್ ಮಾಡುವ ಆದೇಶ ಹೊರಡಿಸಲಿ ಎಂದು ಲಕ್ಷ್ಮಣ ಸವದಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗ್ಳೂರು ಮಾಲ್ ಪಂಚೆ ಪ್ರಕರಣ : ಪವರ್ ಕಟ್ ಮಾಡಿಸಿ-ಸದನದಲ್ಲಿ ಸಿಡಿದೆದ್ದ ಅಥಣಿ ಸಾಹುಕಾರ್
