ಬೆಂಗಳೂರು : ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ವಿವಿಧ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ತಮಿಳುನಾಡು ಸರ್ಕಾರವು ಕರ್ನಾಟಕಕ್ಕೆ ಒಂದಿಲ್ಲೊಂದು ವಿಚಾರದಲ್ಲಿ ಪೈಪೋಟಿಯನ್ನು ನೀಡುತ್ತಲ್ಲೇ ಇದೆ. ದೇಶದಲ್ಲೇ ಕರ್ನಾಟಕ ಹಾಗೂ ತಮಿಳುನಾಡು ಸಾಕಷ್ಟು ಅಭಿವೃದ್ಧಿ ಹೊಂದಿರುವ ರಾಜ್ಯಗಳಾಗಿವೆ. ದಕ್ಷಿಣ ಭಾರತದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿರುವ ಹಾಗೂ ಹೆಚ್ಚು ತೆರಿಗೆಯನ್ನು ಪಾವತಿ ಮಾಡುತ್ತಿರುವ ರಾಜ್ಯಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಇವೆ.
ಈ ಎರಡೂ ರಾಜ್ಯಗಳ ನಡುವೆ ವ್ಯವಹಾರಿಕ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಪೈಪೋಟಿ ಮುಂದುವರಿದಿದೆ. ಇದೀಗ ತಮಿಳುನಾಡು ಹೊಸೂರು ಮಾತ್ರವಲ್ಲದೆ ಮತ್ತೊಂದು ಭಾಗದಲ್ಲೂ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ತಮಿಳುನಾಡು ಸರ್ಕಾರ ಅಲ್ಲಿನ ರಾಜಧಾನಿ ಚೆನ್ನೈ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಇದರೊಂದಿಗೆ ತಮಿಳುನಾಡಿನ ರಾಜಧಾನಿ ಚೆನ್ನೈನಿಂದ 75 ಕಿ.ಮೀ ದೂರದಲ್ಲಿರುವ ಪರಂದೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಹೊಸೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ತುಸು ಕಠಿಣವಾಗುತ್ತಿದ್ದಂತೆಯೇ “ಪ್ಲ್ಯಾನ್ ಬಿ”ಯನ್ನು ತಮಿಳುನಾಡು ಸರ್ಕಾರ ಮಾಡಿಕೊಂಡಿದೆ ಅಂತಲೇ ಹೇಳಲಾಗುತ್ತಿದೆ. ಈ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯನ್ನು ತಮಿಳುನಾಡು ಸರ್ಕಾರ ಪ್ರಾರಂಭ ಮಾಡಿದೆ. ಆದರೆ ಇದಕ್ಕೆ ರಾಜಕೀಯ ನಾಯಕರ ವಿರೋಧ ಹಾಗೂ ಸ್ಥಳೀಯರ ಪ್ರತಿಭಟನೆಗಳು ಸಹ ಮುಂದುವರಿದಿದೆ ಎನ್ನಲಾಗಿದೆ.
ಈ ರೀತಿ ದಕ್ಷಿಣ ಭಾರತದಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ ಸಂಖ್ಯೆ ಹೆಚ್ಚಳವಾಗುತ್ತಿರುವುದು. ಆಕಾಶದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವ ರೀತಿಯೇ ಆಕಾಶದಲ್ಲೂ ವಿಮಾನಗಳ ಸಂಚಾರದ ಸಮಯದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದೀಗ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವಿದ್ದು. ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇದೂ ಕಗ್ಗಂಟಾಗಿದೆ.
ವಿದೇಶಿ ಹೂಡಿಕೆಯ ಆಕರ್ಷಣೆ: ಒಂದು ವಿಮಾನ ನಿಲ್ದಾಣದ ಎಂದರೆ ಅದರ ಹಿಂದೆ ಹಲವು ವಿಚಾರಗಳು ಇವೆ. ಅದರಲ್ಲಿ ವಿದೇಶಿ ಹೂಡಿಕೆ, ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವಿಚಾರಗಳು ಸೇರಿವೆ. 1990ರಲ್ಲಿ ತಮಿಳುನಾಡು ಸರ್ಕಾರವು ಚೆನ್ನೈನಲ್ಲಿ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಮೂಲಕ ಬೆಂಗಳೂರಿಗಿಂತ ವಿದೇಶಿ ಹೂಡಿಕೆ ಹಾಗೂ ವ್ಯಾಪಾರದ ವಿಷಯದಲ್ಲಿ ಮೇಲುಗೈ ಸಾಧಿಸಿತ್ತು. ಇದೀಗ ಚೆನ್ನೈನ ಎರಡನೇ ವಿಮಾನ ನಿಲ್ದಾಣವೂ ಇದೇ ಮಾದರಿಯಲ್ಲಿ ಪೈಪೋಟಿ ನೀಡಲಿದೆಯೇ ಎನ್ನುವ ಚರ್ಚೆ ಶುರುವಾಗಿದೆ.
ಕರ್ನಾಟಕ ಸರ್ಕಾರವು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಅಷ್ಟೊಂದು ಪ್ರಗತಿ ಸಾಧಿಸುತ್ತಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಚೆನ್ನೈಗೆ ಹೋಲಿಕೆ ಮಾಡಿದರೆ ಇಲ್ಲಿ ಮೂಲಸೌಕರ್ಯ ಹಾಗೂ ಮೆಟ್ರೋ ಸಾಕಷ್ಟು ಅಭಿವೃದ್ಧಿ ಕಂಡಿದೆ.
ವಿಮಾನ ನಿಲ್ದಾಣ ಸೇವೆಯಲ್ಲಿ ನಾವೇ ಮೊದಲು: ಇನ್ನು ತಮಿಳುನಾಡಿನಲ್ಲಿ ಮೊದಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೂ. ಹೆಚ್ಚು ಆಕರ್ಷಕ ಹಾಗೂ ಹೂಡಿಕೆದಾರರ ಸ್ನೇಹಿಯಾಗಿದ್ದು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಹೇಳಲಾಗುತ್ತದೆ. ಯಾಕೆಂದರೆ ನಗರದ ಹೊರವಲಯದಲ್ಲಿ ಹಾಗೂ ಅಡೆತಡೆ ಇಲ್ಲದ ಪ್ರಯಾಣ ಇದಕ್ಕೆ ಪ್ಲಸ್ ಪಾಯಿಂಟ್ಸ್ ಆಗಿದೆ ಎಂದೇ ಹೇಳಲಾಗುತ್ತದೆ.
ಇನ್ನು ಬೆಂಗಳೂರಿನ ನಂತರ ಹೈದರಾಬಾದ್ ವಿಮಾನ ನಿಲ್ದಾಣ ಸಹ ಜನಸ್ನೇಹಿಯಾಗಿದೆ. ಈ ಎಲ್ಲಾ ಕಾರಣಗಳಿಗಾಗಿ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೆ ತಮಿಳುನಾಡಿಗೆ ಮತ್ತಷ್ಟು ಪೈಪೋಟಿ ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಕರ್ನಾಟಕದ ಪೈಪೋಟಿಯನ್ನು ಎದುರಿಸಲು ತಮಿಳುನಾಡು ಸರ್ಕಸ್ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.