ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ತಾರಿಹಾಳ ಗ್ರಾಮದಲ್ಲಿ ಬಾಣಂತಿ ಇರುವ ಬಡ ಕುಟುಂಬದ ಮನೆಯನ್ನು ಇದೀಗ ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಎಂಬ ಫೈನಾನ್ಸ್ ಹರಾಜಿಗೆ ಇಟ್ಟಿದೆ. ಮನೆ ನಿರ್ಮಾಣಕ್ಕೆ ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹರ್ ಎಂಬುವವರು 5 ಲಕ್ಷ ಪಡೆದಿದ್ದರು. ಮೂರು ವರ್ಷಗಳ ಕಾಲ ನಿರಂತರ ಕಂತು ಕಟ್ಟಿದ್ದರು. ವೃದ್ದ ತಾಯಿ ಮತ್ತು ಮಗಳ ಹೆರಿಗೆ ಕಾರಣಕ್ಕೆ ಆರು ತಿಂಗಳಿನಿಂದ ಕಂತು ತುಂಬಲು ಸಾಧ್ಯವಾಗಿರಲಿಲ್ಲ. ಈಗ ಕೋರ್ಟ್ ಆದೇಶದಂತೆ ಪೊಲೀಸರು ಮತ್ತು ವಕೀಲರ ಸಮ್ಮುಖದಲ್ಲಿ ಮನೆಯನ್ನು ಜಪ್ತಿ ಮಾಡಿದ್ದಾರೆ. ಹೀಗಾಗಿ ಬಾಣಂತಿ ಮತ್ತು ಅವರ ಕುಟುಂಬ ಬೀದಿಪಾಲಾಗಿದೆ. ಬಾಣಂತಿ ಕುಟುಂಬ ಮನೆಯ ಬಳಿ ಶೆಡ್ ನಲ್ಲಿ ಜೀವನ ನಡೆಸುವಂತಾಗಿದೆ. ಬಾಣಂತಿಯ ಕುಟುಂಬ ಒಂದೇ ಒಂದೇ ಕಂತಿನಲ್ಲಿ ₹ 7.5 ಲಕ್ಷ ತುಂಬುವಂತೆ ಫೈನಾನ್ಸ್ ಸಿಬ್ಬಂದಿ ಹೇಳುತ್ತಿದ್ದು ಬಾಣಂತಿ ಕುಟುಂಬ ಈಗ ಬೀದಿಗೆ ಬಂದಿದೆ.