ಬೆಳಗಾವಿ:
ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಮಲಪ್ರಭಾ ನದೀ ತೀರದ ಚಿಕ್ಕಹಟ್ಟಿಹೊಳಿ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ಸಂಭ್ರಮದಿಂದ ಜರುಗಿತು.
ರಥೋತ್ಸವ ಜರುಗುವ ಸಂಭ್ರಮದಲ್ಲಿ ಲಕ್ಷ್ಮೀ ಹೆಬ್ಬಾಳಕರ ತವರೂರು ಅಭಿಮಾನಿ ಬಳಗ ಚಿಕ್ಕಹಟ್ಟಿಹೊಳಿಯ ಅಧ್ಯಕ್ಷರು ಸರ್ವ ಸದಸ್ಯರು ಸೇರಿ ಬಾಳೆಹಣ್ಣಿನ ಮೇಲೆ “” ಲಕ್ಷ್ಮೀ ಅಕ್ಕಾ 2023 ಮಂತ್ರಿ ಪಕ್ಕಾ “” ಎಂದು ಬರೆದು 111 ಬಾಳೆ ಹಣ್ಣುಗಳನ್ನು ರಥೋತ್ಸವ ಜರುಗುವ ಸಂಭ್ರಮದಲ್ಲಿ ಭಕ್ತಿಯಿಂದ ಶ್ರೀ ವೀರಭದ್ರೇಶ್ವರನಲ್ಲಿ ಬೇಡಿಕೊಂಡು ಭಕ್ತಿಯಿಂದ ರಥಕ್ಕೆ ಬಾಳೇಹಣ್ಣನ್ನು ಸಮರ್ಪಿಸಿದರು.
ಈ ವೇಳೆ ಲಕ್ಷ್ಮಿ ಹೆಬ್ಬಾಳಕರ ತವರೂರು ಅಭಿಮಾನಿ ಬಳಗದ ಅಧ್ಯಕ್ಷರಾದ ವೀರಭದ್ರ ಸಣ್ಣಕ್ಕಿ, ಜಗದೀಶ ಕಾದ್ರೊಳ್ಳಿ , ಮಂಜುನಾಥ್ ಮಾಸ್ತಮರಡಿ, ಈರಯ್ಯ ಹಾಲಗಿಮರ್ಡಿ, ನಾಗರಾಜ ಸಣ್ಣಕ್ಕಿ, ಶ್ರೀಧರ ಜೈನರ, ಪ್ರಕಾಶ ತಳವಾರ, ಸೇರಿದಂತೆ ಗ್ರಾಮದ ಹಿರಿಯರು ಹಾಜರಿದ್ದರು.
ಕುಕಡೊಳ್ಳಿ, ಎಮ್ ಕೆ ಹುಬ್ಬಳ್ಳಿ, ಪಾರೀಶ್ವಾಡ ಹಿರೆಬಾಗೇವಾಡಿ, ಅರಳಿಕಟ್ಟಿ,ಬಸ್ಸಾಪೂರ, ಸೇರಿದಂತೆ ಜಿಲ್ಲೆಯ ವಿವಿದ ಗ್ರಾಮಗಳ ಭಕ್ತರು ಸೇರಿದಂತೆ ಧಾರವಾಡ, ಬಾಗಲಕೋಟಿ, ಹಾವೇರಿ, ವಿಜಯಪೂರ, ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರ ರಾಜ್ಯದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.