ಬೆಳಗಾವಿ :
ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಇದನ್ನು ಬೆಳಗಾವಿ ಬಲಿಜ ಸಮುದಾಯ ಸ್ವಾಗತಿಸಿದೆ. ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಸಂಘದ ಬೆಳಗಾವಿ ಅಧ್ಯಕ್ಷ ಮಾರುತಿ ಜಿ. ತೆಲಂಗ (ನಾಯ್ಡು) ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಲಿಜ ಸಮುದಾಯಕ್ಕೆ ಪ್ರವರ್ಗ 3ಎ ನಿಂದ 2ಎ ಗೆ ಸೇರ್ಪಡೆ, ಅಭಿವೃದ್ಧಿ ನಿಗಮ ರಚನೆ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯಾದ್ಯಂತ ಸಮುದಾಯದ ಸಂಘಟನೆಗಳು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದವು. ಹೋರಾಟದ ಫಲವಾಗಿ ನಿಗಮ ಮಂಡಳಿ ಸ್ಥಾಪನೆಗೆ ಆದೆ. ಈ ಆದೇಶ ಹೊರಡಿಸಿರುವುದಕ್ಕೆ ಸರಕಾರಕ್ಕೆ ರಾಜ್ಯ ಸಮಗ್ರ ಬಲಿಜ ಸಂಘ ಧನ್ಯವಾದ ಸಲ್ಲಿಸಿದೆ. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿ ಪೂರ್ಣಗೊಳ್ಳುವ ಮುನ್ನ 2ಎ ಮೀಸಲಾತಿ ವಾಪಸ್ ನೀಡಬೇಕು. ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ ಹಾಗೂ ಹಾವನೂರು ಆಯೋಗದ ವರದಿಯಂತೆ ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.