ಬೆಳಗಾವಿ : ಮರಾಠಾ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಬಾಳಾರಾಮ ಪಾಟೀಲರನ್ನು ಹ್ಯಾಪಿ ವಾಕರ್ಸ್ ವಾಯುವಿಹಾರಿ ಬಳಗದಿಂದ ಇಂದು ಆತ್ಮೀಯವಾಗಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಎ.ಎಂ.ಪಾಟೀಲರು ಮಾತನಾಡಿ ಬಾಳಾರಾಮ ಪಾಟೀಲರ ನಿಸ್ವಾರ್ಥ, ಜನಹಿತ ಸಾಮಾಜಿಕ ಸೇವೆಯನ್ನು ಕೊಂಡಾಡಿದರು. ಅವರ ಅವಧಿಯಲ್ಲಿ ಬ್ಯಾಂಕನ್ನು ಶ್ರೇಯೋಭಿವೃದ್ಧಿಯತ್ತ ಸಾಗಲಿ ಎಂದು ಸರ್ವರು ಶುಭನುಡಿಗಳನ್ನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಳಾರಾಮ ಪಾಟೀಲರು, ನನ್ನ ನಿಸ್ವಾರ್ಥ ಸೇವೆ ನನ್ನನ್ನು ಉನ್ನತ ಹುದ್ದೆಗಳತ್ತ ಕೊಂಡೊಯ್ಯುವಂತೆ ಮಾಡಿದೆ. ಬ್ಯಾಂಕ್ ಹಿತಕಾಯ್ದು ಸದಸ್ಯರಿಗೆ ಅನುಕೂಲ ಮಾಡಿಕೊಡುವುದೇ ನನ್ನ ಪ್ರಥಮ ಪ್ರಾಶಸ್ತ್ಯ ಎಂದರು.
ಹ್ಯಾಪಿ ವಾಕರ್ಸ್ ಪದಾಧಿಕಾರಿಗಳಾದ ಮಾರುತಿ ಸಾಂಬ್ರೇಕರ, ಆನಂದ ಜಮಖಂಡಿ, ಉಲ್ಲಾಸ ಬಾಳೆಕುಂದ್ರಿ, ಎ.ಎಂ.ಪಾಟೀಲ, ಪ್ರವೀಣ ಖೋಡಾ,ವಿಜಯ ಪೋರವಾಲ, ಪರುಶರಾಮ ಗುರವ,ಗಿರೀಶ ಹತ್ತರಕಿ, ರಾಜೇಶ ಕಾಮತ, ಮಿಲಿಂದ ಬೈಲೂರ, ಶಿವರಾಯ ಏಳುಕೋಟಿ ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಿದ್ದರು.