ಬಾಗೇವಾಡಿ ಪೊಲೀಸರಿಂದ ತಿಗಡಿ ಬೈಕಗಳ್ಳನ ಬಂಧನ ..!
PSI ಅವಿನಾಶ ಕೈಗೆ ಸಿಕ್ಕಿಬಿದ್ದ ಕಳ್ಳ ಆಜಾದ ಮೆಹಬೂಬ್..!
ಬೆಳಗಾವಿ : ತಾಲೂಕಿನಲ್ಲಿ ಬೈಕ್ ಕಳ್ಳತನ ಮಾಡಿ ತಲೆಮರಿಸಿಕೊಂಡಿದ್ದ ತಿಗಡಿ ಗ್ರಾಮದ ಖದಿಮ ಕಳ್ಳನನ್ನು ಹಿರೇಬಾಗೇವಾಡಿ ಪೊಲೀಸ ಠಾಣೆಯ ಪಿಎಸ್ಐ ಅವಿನಾಶ ಯರಗೊಪ್ಪ ನೇತೃತ್ವದಲ್ಲಿ ಬಂಧಿಸಿ ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಮುಸ್ಲಿಂ ಸಮುದಾಯದ ಆಜಾದ ಮೆಹಬೂಬ ಸುಬಾನಿ ಕಿಲ್ಲೇದಾರ ಎಂಬಾತ ಬಂಧಿತ ಆರೋಪಿ. ಈತ ಹಲವು ದಿನಗಳಿಂದ ಬೈಕ್ ಕಳ್ಳತನ ಮಾಡಿ ಪೊಲೀಸರಿಗೆ ಸಿಗದೆ ಆಟವಾಡುತ್ತಿದ್ದ. ಆದರೆ ಇತ್ತೀಚಿಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಖದಿಮ ಮೆಹಬೂಬ ಕಿಲ್ಲೇದಾರನಿಗೆ ಪಕ್ಕಾ ಗಾಳ ಹಾಕಿ ಹಿಡಿಯುವಲ್ಲಿ ಇಲ್ಲಿನ ಪೊಲೀಸರು ಸಫಲರಾದರು.
ಮತ್ತು ಈತ ಕದ್ದು ವಶದಲ್ಲಿಟ್ಟುಕೊಂಡಿದ್ದ ಲಕ್ಷಾಂತರ ರೂ ಮೌಲ್ಯದ 5 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಅಶೋಕ ಮಿಂಡೊಳ್ಳಿ, ASI ಬಾಗಿ, ತುರಮುರಿ, ಪದಕಿಮಠ,ಭೂಸಿ, ಕೊಚೇರಿ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.