ನ್ಯಾಯಾಲಯದಿಂದ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ ಬಾಗೇವಾಡಿ ಪೊಲೀಸರು..!
DCP ಸ್ನೇಹಾ ಜಾಲಕ್ಕೆ ನಾಲ್ಕು ಗಂಟೆಯೊಳಗೆ ಸಿಕ್ಕಿಬಿದ್ದ ಕಳ್ಳ..!
PSI ಅವಿನಾಶ, PC ನಾಗಪ್ಪ, ಬಾಬಣ್ಣಗೆ ಕಮೀಷನರ್ ಶಬ್ಬಾಷಗಿರಿ.
ಬೆಳಗಾವಿ : ನ್ಯಾಯಾಲಯಕ್ಕೆ ವಿಚಾರಣೆಗೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿಯನ್ನು ನಾಲ್ಕು ಘಂಟೆಯೊಳಗೆ ಪುನಃ ಬಂಧಿಸುವಲ್ಲಿ ಬಾಗೇವಾಡಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳ್ಳತನ ಪ್ರಕರಣದಲ್ಲಿ ಬೆಳಗಾವಿಯ ಹಲವು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಅಬ್ದುಲ್ ಗನಿ ಶಬ್ಬೀರ್ ಶೇಕ್ ಇಂದು ಜೆಎಂಎಫ್ ಸಿ ನ್ಯಾಯಾಲಯದ ಆವರಣದಿಂದ ಪರಾರಿಯಾಗಿದ್ದ, ಪೋಲಿಸರ ಸಮ್ಮುಖದಲ್ಲಿಯೇ ಆರೋಪಿ ಓಡಿ ಹೋಗಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ಸ್ನೇಹಾ ಪಿ ವಿ ಅವರು ನಗರ ಸುತ್ತಮುತ್ತ ಪೊಲೀಸರಿಂದ ತನಿಖೆ ಚುರುಕುಗೊಳಿಸಿದ್ದರು.
ಟಿಳಕವಾಡಿ ಪೊಲೀಸರು ಪ್ರಕರಣ ಒಂದರ ವಿಚಾರಣೆಗೆ ಆತನನ್ನು ಕರೆತಂದಿದ್ದ ವೇಳೆ ಅಲ್ಲಿದ್ದ ಜನರ ನಡುವೆ ಆತ ಓಡಿ ನಾಪತ್ತೆಯಾಗಿ, ಹಿರೇಬಾಗೇವಾಡಿಯ ಮುಸ್ಲಿಂ ಗಲ್ಲಿಯಲ್ಲಿ ಅವಿತು ಕುಳಿತಿದ್ದ, ಇತನಿಗಾಗಿ ಜಾಲವನ್ನು ಬಿಸಿದ್ದ ಬಾಗೇವಾಡಿ ಪೊಲೀಸರು ಪಿಎಸ್ಐ ಅವಿನಾಶ ಯರಗೊಪ್ಪ ನೇತೃತ್ವದಲ್ಲಿ ಹುಡುಕಾಟ ನಡೆಸಿದಾಗ ಇತ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದಿದ್ದಾನೆ.
ಈ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುವ ಬಾಗೇವಾಡಿ ಪಿಎಸ್ಐ ಅವಿನಾಶ ಯರಗೊಪ್ಪ, ಸಿಬ್ಬಂದಿ ನಾಗಪ್ಪ ಸುತಗಟ್ಟಿ ಹಾಗೂ ಬಾಬಣ್ಣರಿಗೆ ನಗರ ಪೊಲೀಸ ಆಯುಕ್ತ ಸಿದ್ಧರಾಮಪ್ಪ ಬಹುಮಾನ ಘೋಷಿಸಿದ್ದಾರೆ.