ಮುರಗೋಡ :
ನಾವೆಲ್ಲ ಭಗವಂತನ ಹಾಗೂ ಸಂತ ಬಾಳುಮಾಮಾ ಅಜ್ಜನ
ಮೇಲೆ ನಂಬಿಕೆಯಿಟ್ಟು ಆಧ್ಯಾತ್ಮಿಕ ಚಿಂತನೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಸ್ಮರಿಸಿದಲ್ಲಿ ತಮ್ಮ ಇಷ್ಟಾರ್ಥಗಳೆಲ್ಲ ಈಡೇರಲು ಸಾಧ್ಯವಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಸೂರಣ್ಣವರ ಹೇಳಿದರು.
ಸಮೀಪದ ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ
ಬಾಳುಮಾಮಾ ಜಾತ್ರೆ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ನಾನಾ
ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇವಸ್ಥಾನದ
ಜೀರ್ಣೋದ್ದಾರಕ್ಕೆ ದೇಣಿಗೆ ನೀಡಿ ಸೇವೆ ಸಲ್ಲಿಸಿದ್ದ ಭಕ್ತರನ್ನು
ಸನ್ಮಾನಿಸಿ ಅವರು ಮಾತನಾಡಿದರು.
ಇಂದು ಮನುಷ್ಯನ ಮನಸ್ಸು ಚಿಂತೆಯಲ್ಲಿ ಮುಳುಗಿದೆ. ನಿರಾಸೆ, ಆಲಸ್ಯತನ ಹೋಗಲಾಡಿಸಿ, ನೆಮ್ಮದಿಯಿಂದಿರಲು ಧಾರ್ಮಿಕ
ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಜೀವನ ಪಾವನವಾಗುತ್ತದೆ
ಎಂದರು.
ಪ್ರಗತಿಪರ ರೈತ ನಾಗರಾಜ ದೇಸಾಯಿ ಅಧ್ಯಕ್ಷತೆ
ವಹಿಸಿದ್ದರು.
ರಂಗ ಕಲಾವಿದ ಯಲ್ಲಪ್ಪ ನಾಯ್ಕರ, ಯುವ ಮುಖಂಡ
ಮೋಹನಗೌಡ ಪಾಟೀಲ, ಪಿಡಿಒ ಜಿ.ಎಂ. ಗಿರೆನ್ನವರ ಮಾತನಾಡಿದರು.
ಗ್ರಾ.ಪಂ. ಸದಸ್ಯೆ ಮಂಜುಳಾ ನಾಯ್ಕರ, ರಾಯಪ್ಪ ಹುಣಶೀಕಟ್ಟಿ,
ಬಾಳೇಶ ಮೆಟಗುಪ್ಪಿ, ಲಕ್ಷ್ಮೀ ಪೆಂಡಾರಿ, ವೀರಪ್ಪ ಉಣ್ಣಿ, ಶಿವಬಸವ್ವ ನಾಯ್ಕಪ್ಪಗೋಳ, ಬಾಳೇಶ ಸೂರಣ್ಣವರ, ಶಂಕ್ರೆಪ್ಪ
ನಾಯಕ, ನಾಗಪ್ಪ ಮಿಜ್ಜಿ, ಈರಪ್ಪ ಗೊಡಚಿ, ನಾಗಪ್ಪ ಬಸಟ್ಟಿ ಇನ್ನಿತರರು ಇದ್ದರು. ಸೋಮಪ್ಪ ಮಳಗಲಿ ಸ್ವಾಗತಿಸಿದರು.
ಭೀರಪ್ಪ ಸೂರಣ್ಣವರ ನಿರೂಪಿಸಿದರು. ಯಲ್ಲಪ್ಪ ಹುಣಶೀಕಟ್ಟಿ
ವಂದಿಸಿದರು.