ಬೆಂಗಳೂರು: ಹಾವುಗಳ ಬಗ್ಗೆ ಅರಿತುಕೊಳ್ಳಲು ಹಾಗೂ ಹಾವು ಕಡಿತದ ತಡೆಗಟ್ಟುವಿಕೆಯ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ಕರ್ನಾಟಕದಲ್ಲಿ ಮೊದಲ ಬಾರಿಗೆ ವಾಟ್ಸಾಪ್ ಚಾಟ್ ಅನ್ನು ಪ್ರಾರಂಭಿಸಲಾಗಿದೆ.
ದಲಯಾನಾ ಟ್ರಸ್ಟ್ ಸಹಯೋಗದಲ್ಲಿ ಹೂಮೇನೊಸೈಟಿ ಇಂಟರ್ ನ್ಯಾಶನಲ್/ಇಂಡಿಯಾ ಪ್ರಾರಂಭಿಸಿದ ಚಾಟ್ ಬಾಟ್, ಸ್ಥಳೀಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡುಬರುವ ಹಾವು ಪ್ರಭೇದಗಳ ಬಗ್ಗೆ ತಿಳಿಸಿಕೊಡುತ್ತದೆ.
ಹಾವು ಕಡಿತದಿಂದ ಜೀವ ಉಳಿಸಿಕೊಳ್ಳಬಹುದಾದ ಪ್ರಥಮ ಚಿಕಿತ್ಸೆ, ಹಾವು ಕಡಿತದ ತಡೆಗಟ್ಟುವಿಕೆ ಸಲಹೆಗಳು ಹಾಗೂ ಹಾವುಗಳ ಬಗ್ಗೆ ಇರುವ ತಪ್ಪು ಮಾಹಿತಿಯ ಮಿಥ್ಯ ಹಾಗೂ ಅದರಿಂದ ಆಗಬಹುದಾದ ಕ್ರೌರ್ಯದ ಕೃತ್ಯಗಳಿಗೆ ಕಾರಣದ ಬಗ್ಗೆಯೂ ತಿಳಿಸುತ್ತದೆ.
ಮೊ. 91541 90472ಗೆ ಹಾಯ್ ಸಂದೇಶ ಕಳುಹಿಸುವ ಮೂಲಕ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಪ್ರಸಾರವಾಗುವ ದೃಶ್ಯವಿಷಯವನ್ನು ವೀಕ್ಷಿಸಬಹುದು.