ಬೆಳಗಾವಿ:
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃಣಾಲ ಅವರ ಕೊರಳಲ್ಲಿ ಕಂಡಿದ್ದ ಟೈಗರ್ ಪೆಂಡೆಂಟ್ ವಿಷಯ ಸೋಶಿಯಲ್ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ ಎಂದು ಬೆಳಗಾವಿ ಡಿಸಿಎಫ್ ಕಲ್ಲೋಳಕರ ತಿಳಿಸಿದ್ದಾರೆ.
ಸೋಷಿಯಲ್ ಮಿಡಿಯಾಗಳಲ್ಲಿ ಗಮನಕ್ಕೆ ಬರುತ್ತಿದ್ದಂತೆ ಅದರ ಬಗ್ಗೆ ಪರಿಶೀಲನೆ ನಡೆಸಲು ಕೆಳಹಂತದ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಡಿಸಿಎಫ್ ಕಲ್ಲೋಳಕರ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಸಂಜೆವರೆಗೆ ಟೈಗರ್ ಪೆಂಡೆಂಟ್ ಅವರು ಧರಿಸಿದ್ದರ ಬಗ್ಗೆ ಪರಿಶೀಲಿಸಿ ವಿಚಾರಿಸುತ್ತೇವೆ.
ಈ ಸಂಬಂಧ ಏಡು ದಿನಗಳ ಹಿಂದೆ ರಾಜ್ಯ ವನ್ಯಜೀವಿ ಪಿಸಿಸಿಎಫ್ ನೇತೃತ್ವದಲ್ಲಿ ರಚಿಸಲಾದ ರಾಜ್ಯಮಟ್ಟದ ಸಮಿತಿಗೂ ವರದಿ ನೀಡಲಾಗುವುದು ಎಂದರು.
ವನ್ಯಜೀವಿ ಕಾಯ್ದೆಗಳ ಅಡಿ ಸಾಕಷ್ಟು ಸ್ಪಷ್ಟ ನಿರ್ದೇಶನ ಮತ್ತು ಸೂಚನೆಗಳು ಸಾರ್ವಜನಿಕ ವಲಯದಲ್ಲಿ ಚಾಲ್ತಿಯಲ್ಲಿವೆ ಹೀಗಿದ್ದಾಗಲೂ ವನ್ಯ ಅಪರಾಧಗಳು ನಡೆಯಬಾರದು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಧರಿಸಿದ್ದಾರೆ ಎನ್ನಲಾದ ಟೈಗರ್ ಪೆಂಡೆಂಟ್ ಚಿತ್ರದ ನೈಜ್ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ತಪ್ಪಿತಸ್ಥರು ಕಂಡುಬಂದರೆ ಸರಕಾರದ ಸಮಿತಿಗೆ ವರದಿ ನೀಡಲಾಗುವುದು ಎಂದರು.