ಬೆಳಗಾವಿ :
ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕರಿಗೆ ಮತ್ತು ಮಹಿಳಾ ನಿರುದ್ಯೋಗಿಗಳಿಗೆ ಕೋಳಿ ಸಾಕಾಣಿಕೆಯ 10 ದಿನಗಳ ಉಚಿತ ತರಬೇತಿಯನ್ನು ಜುಲೈ 4 ರಿಂದ ಹಮ್ಮಿಕೊಳ್ಳಲಾಗಿದೆ.
ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು 18 ರಿಂದ 45 ವಯಸ್ಸಿನವರಾಗಿರಬೇಕು ಹಾಗೂ ಗ್ರಾಮೀಣ ಪ್ರದೇಶದವರಾಗಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರಬೇಕು.
ತರಬೇತಿಯಲ್ಲಿ ಊಟ, ವಸತಿ ಸಂಪೂರ್ಣ ಉಚಿತವಾಗಿರುತ್ತದೆ.
ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಜುಲೈ 3 ಆಗಿರುತ್ತದೆ. ಆರ್ಜಿಯನ್ನು ಸಂಸ್ಥೆಯ ಆರ್ಜಿ ನಮೂನೆಯಲ್ಲಿ ಅಥವಾ ಬಿಳಿಹಾಳಿಯಲ್ಲಿ ನೇರವಾಗಿ ಕಾರ್ಯಾಲಯಕ್ಕೆ ಅಥವಾ ಪೋಸ್ಟ್ ಮುಖಾಂತರ ನೀಡಬಹುದು.
ಅರ್ಜಿಯ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು: ಬಿಪಿಎಲ್ ಕಾರ್ಡ್, ನರೇಗಾ (ಜಾಬ್ )ಕಾರ್ಡ್, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಹಾಗೂ ಎರಡು ಭಾವಚಿತ್ರಗಳು.
ಸಂಸ್ಥೆಯ ವಿಳಾಸ:- ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್ಸೆಟಿ), ಪ್ಲಾಟ ನಂ. ಸಿ ಎ -೦3 (ಪಾರ್ಟ) ಕಣಬರ್ಗಿ ಇಂಡಸ್ಟ್ರೀಯಲ್ ಎರಿಯಾ, ಆಟೋ ನಗರ.ಬೆಳಗಾವಿ – 590015
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೩೧-೨೪೪೦೬೪೪, ೮೨೯೬೭೯೨೧೬೬, ೯೮೪೫೭೫೦೦೪೩, ೮೦೫೦೪೦೬೮೬೬, ೮೮೬೭೩೮೮೯೦೬, ೯೪೪೯೮೬೦೫೬೪ ಗೆ ಬೆಳಗ್ಗೆ ೯.೩೦ ರಿಂದ ಸಂಜೆ ೬ ಗಂಟೆ ವರೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.