ಬೆಳಗಾವಿ : ಬೆಳಗಾವಿ ದಕ್ಷಿಣ ವಲಯದ ವ್ಯಾಪ್ತಿಯ ಸಬ್ ರಿಜಿಸ್ಟರ್ ಕಚೇರಿ ಮೇಲೆ ಲೋಕಾಯುಕ್ತರು ಬುಧವಾರ ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದ ಸಬ್ ರಿಜಿಸ್ಟರ್ ಕಚೇರಿ ಹಿರಿಯ ಉಪನೋಂದಣಾಧಿಕಾರಿ ಕರಿಬಸವನಗೌಡ ಪಿ ಮತ್ತು ಸಿಬ್ಬಂದಿಗಳ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಸಾರ್ವಜನಿಕರು ಮಾಡಿದ್ದರು. ನಿರಂತರ ದೂರು ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಪ್ರತಿಯೊಂದು ದಾಖಲೆಗಳ ಮಾಹಿತಿ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು, ಲೋಕಾಯುಕ್ತ ಸಿಪಿಐ ಅಡಿವೆಪ್ಪ ಬೂದಿಗೊಪ್ಪ ಸೇರಿ 10ಕ್ಕೂ ಅಧಿಕ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ.