ಬೆಳಗಾವಿ : ಸಕಲ ಮರಾಠಾ ಸಮಾಜ ಬೆಳಗಾವಿ ವತಿಯಿಂದ ಕ್ರೀಡೆ, ರಾಜಕೀಯ, ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮರಾಠಾ ಸಮುದಾಯದ ಪ್ರತಿಭೆಗಳಿಗೆ ಸಕಲ ಮರಾಠಾ ಸಮಾಜದ ವತಿಯಿಂದ ಸನ್ಮಾನ ಮಾಡುತ್ತಿದ್ದು, ಬರುವ ದಿನಗಳಲ್ಲಿಯೂ ಸಾಧಕರ ಪ್ರತಿಭೆಗೆ ನಮ್ಮ ಪ್ರೋತ್ಸಾಹ ಇದ್ದೆ ಇರುತ್ತದೆ ಎಂದು ಬಿಜೆಪಿ ಧುರೀಣ ಹಾಗೂ ಸಕಲ ಮರಾಠಾ ಸಮಾಜದ ನಾಯಕ ಕಿರಣ ಜಾಧವ ಹೇಳಿದರು.
ರವಿವಾರ ನಗರದ ಜತ್ತಿ ಮಠದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮರಾಠಾ ಸಮುದಾಯದಲ್ಲಿ ಹಲವಾರು ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ, ಅಂತಹ ಮರಾಠಾ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಸಕಲ ಮರಾಠಾ ಸಮಾಜದ ಕರ್ತವ್ಯವಾಗಿದೆ, ಆದ ಕಾರಣ ಇಂದು ಸಮುದಾಯದ ಕೆಲ ಸಾಧಕರಿಗೆ ಸನ್ಮಾನ ನಡೆಯುತ್ತಿದೆ ಎಂದು ಹೇಳಿದರು.
ಸಕಲ ಮರಾಠಾ ಸಮಾಜದಿಂದ ಬೆಳಗಾವಿಯಲ್ಲಿ ಪ್ರತ್ಯೇಕವಾದ ಕ್ರೀಡಾ ವಿಭಾಗವನ್ನು ರಚಿಸಿದ್ದೇವೆ, ಈ ಹಿಂದೆ ಮರಾಠಾ ಸಮುದಾಯದ ಏಳಿಗೆಗಾಗಿ ಹಲವಾರು ಕಾರ್ಯಗಳನ್ನು ನಮ್ಮ ಸಮಾಜ ಮಾಡುತ್ತಾ ಬಂದಿದ್ದು, ಈಗ ಕ್ರೀಡಾ ಸಾಧಕರಿಗೆ ಒಂದು ಒಳ್ಳೆಯ ವೇದಿಕೆ ಕಲ್ಪಿಸಿ ಕೊಡಲಾಗುತ್ತದೆ. ಅದರ ಜೊತೆಗೆ ಬರುವ ದಿನಗಳಲ್ಲಿ ಕರ್ನಾಟಕ, ದೇಶದಲ್ಲಿ ಬೆಳಗಾವಿಯ ಹೆಸರು ಬೆಳಗಿಸಲಿ, ಈಗಾಗಲೇ ಕೆಲ ಪ್ರತಿಭೆಗಳು ಆ ಸಾಧನೆ ಮಾಡಿದ್ದಾರೆ. ಅವರಿಗೆ ನಮ್ಮ ಅಭಿನಂದನೆ ಎಂದರು.
ಮರಾಠಾ ಸಮುದಾಯದ ಕೆಲ ಕ್ರೀಡಾ ಪಟುಗಳಿಗೆ ಹಾಗೂ ಬೇರೆ ಕ್ಷೇತ್ರಗಳ ಸಾಧಕರು ಪರಿಶ್ರಮದಿಂದ ತಮ್ಮ ಕಾರ್ಯ ಮಾಡುತ್ತಾರೆ, ಆದರೆ ಅವರ ಪರಿಶ್ರಮಕ್ಕೆ ಆರ್ಥಿಕ ಅನುಕೂಲವೂ ಬೇಕಾಗಿರುತ್ತದೆ, ಅದಕ್ಕಾಗಿ ನಾನು ನಮ್ಮ ಸಮಾಜಕ್ಕೆ ಮನವಿ ಮಾಡುವೆ. ಬರುವ ದಿನಗಳಲ್ಲಿ ಕ್ರೀಡಾ ಹಾಗೂ ಇತರ ಸಾಧಕರಿಗೆ ನಮ್ಮ ಸಕಲ ಮರಾಠಾ ಸಮಾಜದ ಕ್ರೀಡಾ ಕಮಿಟಿಯಿಂದ ಆದಷ್ಟು ಅನುಕೂಲ ಮಾಡಿಕೊಡೋಣ ಎಂದರು.
ಇಂದು ನಮ್ಮ ಸಕಲ ಮರಾಠಾ ಸಮಾಜದಲ್ಲಿ ಪ್ರತ್ಯೇಕ ಕ್ರೀಡಾ ವಿಭಾಗವನ್ನು ನಿರ್ಮಿಸಿ, ಅದರಿಂದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ನಮ್ಮ ಸಮುದಾಯದ ಸಾಧಕರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಡೋಣ ಎಂದು ಹೇಳಿದರು.
ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ದಸರಾ ಕಂಠೀರವ ಕೇಸರಿ ವಿಜೇತ ತನಿಷ್ ಪಾಟೀಲ, ಕಾಡಾ ಅಧ್ಯಕ್ಷರಾಗಿ ಆಯ್ಕೆ ಆದ ಯುವರಾಜ ಕದಂ, ಪೊಲೀಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಶ್ರುತಿ ಪಾಟೀಲ, ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಪ್ರೇಮ್ ಜಾಧವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಇತರ ಸಾಧಕರಿಗೆ ಸಕಲ ಮರಾಠಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕಿರಣ ಜಾಧವ, ಅಮರ್ ಯಳ್ಳೂರಕರ, ಪ್ರಕಾಶ ಬಿಳಗೊಜಿ, ಸುನಿಲ್ ಜಾಧವ, ರೇಷ್ಮಾ ಪಾಟೀಲ, ಪ್ರವೀಣ ಪಾಟೀಲ, ಮಾಧುರಿ ಜಾಧವ, ಶರದ ಪಾಟೀಲ, ನಿಖಿಲ್ ಮುರಕುಟೆ, ಪ್ರಶಾಂತ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.