This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಅಥಣಿಯಲ್ಲ ಕರುನಾಡ ವೀರ : ಭಾರಿ ಸಂಚಲನ ಮೂಡಿಸಿದ ಅಥಣಿ ಸಾಹುಕಾರ್ ! Athaniyala Karunada Veera: Athani Sahukar created a huge sensation!


ನಾಡಿನ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಉಪಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ, ಅಥಣಿಯ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರು ಮತ್ತೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ? ಹೀಗೊಂದು ಪ್ರಶ್ನೆ ಇದೀಗ ಅಥಣಿ ಮತಕ್ಷೇತ್ರ ಸೇರಿದಂತೆ ಇಡೀ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪೂರಕವಾಗುವಂತೆ ಅಥಣಿಯ ಬಿಜೆಪಿ ಶಾಸಕ ಹಾಲಿ ಬಿಜೆಪಿ ಶಾಸಕ ಮಹೇಶ ಕುಮಟಳ್ಳಿ ಅವರು ಸಹ ಪರೋಕ್ಷವಾಗಿ ಲಕ್ಷ್ಮಣ ಸವದಿ ಅವರ ಸ್ಪರ್ಧೆಗೆ ತಮ್ಮ ಯಾವುದೇ ವಿರೋಧ ಇಲ್ಲ ಎಂದು ಹಸಿರು ತೋರಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಒಂದು ವೇಳೆ ಈ ಬಾರಿ ಲಕ್ಷ್ಮಣ ಸವದಿ ಅವರೇ ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿದರೆ ಆ ನಿರ್ಧಾರಕ್ಕೆ ತಾನು ಬದ್ಧನಿರುವುದಾಗಿ ಸಹಮತ ಸೂಚಿಸಿರುವುದು ಬದಲಾವಣೆಯ ಸೂಚನೆ ಎನ್ನಬಹುದು. ಸ್ವತಃ ಮಹೇಶ ಕುಮಟಳ್ಳಿಯವರ ಹೇಳಿಕೆ ಲಕ್ಷ್ಮಣ ಸವದಿ ಅವರಿಗೆ ಇಮ್ಮಡಿ ಬಲ ತಂದುಕೊಟ್ಟಿದೆ. ಲಕ್ಷ್ಮಣ ಸವದಿ ಅವರು ಅಥಣಿ ವಿಧಾನಸಭಾ ಮತಕ್ಷೇತ್ರಾದ್ಯಂತ ಭಾರಿ ವರ್ಚಸ್ಸು ಹೊಂದಿದ್ದಾರೆ. ಇಡೀ ಮತಕ್ಷೇತ್ರದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಗೆ ಲಕ್ಷ್ಮಣ ಸವದಿ ಅವರೇ ಅಭ್ಯರ್ಥಿಯಾಗಬೇಕು ಎಂಬ ಒತ್ತಾಯ ಪ್ರತಿಧ್ವನಿಸಿದೆ.

ಹೀಗಾಗಿ, ಬಿಜೆಪಿ ವರಿಷ್ಠರು ಬಹುತೇಕ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಒತ್ತಾಸೆ ಗಮನಿಸಿ ಈ ಬಾರಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಕೆಲ ಖಾಸಗಿ ವಾಹಿನಿಗಳು ಸಹ ನಡೆಸಿದ ಸಮೀಕ್ಷೆಯಲ್ಲಿ ಇತರ ಅಭ್ಯರ್ಥಿಗಳಿಗಿಂತ ಲಕ್ಷ್ಮಣ ಸವದಿ ಅವರೇ ಮುಂಚೂಣಿಯಲ್ಲಿ ಭಾರಿ ಮತಗಳ ಅಂತರದಿಂದ ಗೆಲ್ಲುವ ಸಮೀಕ್ಷೆಯನ್ನು ನುಡಿದಿವೆ. ಇವೆಲ್ಲವನ್ನು ಗಮನಿಸಿ ಬಿಜೆಪಿ ಹೈಕಮಾಂಡ್ ಮತ್ತೆ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡಿದರೆ ಅವರು ದಾಖಲೆ ಅಂತರದಿಂದ ಗೆದ್ದು ಬರುವುದರಲ್ಲಿ ಯಾವ ಸಂದೇಹವು ಇಲ್ಲ.

ಹುಬ್ಬೇರಿಸುವಂತಿದೆ ಲಕ್ಷ್ಮಣ ಸವದಿ ಅವರ ಚಾಣಕ್ಯ ನಡೆ: ಲಕ್ಷ್ಮಣ ಸವದಿ ಅವರು ಕ್ರಮಿಸಿದ ಹಾದಿ ಹೂವಿನ ಹಾಸಿಗೆ ಅಲ್ಲ. ಅವರು ಬಹಳ ಕಷ್ಟಪಟ್ಟು ರಾಜಕೀಯ ಚಕ್ರವ್ಯೂಹದಲ್ಲಿ ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತವರು. ಬಿಜೆಪಿಯಲ್ಲಿ ರಾಜ್ಯಮಟ್ಟದ ನಾಯಕರಾಗಿರುವ ಅವರ ಹೆಸರು ಆಗಾಗ ಮುಖ್ಯಮಂತ್ರಿಯ ಹುದ್ದೆಗೂ ಪ್ರಬಲವಾಗಿ ಕೇಳಿಬಂದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಅವರಿಗೆ ಪಕ್ಷ ನಂತರ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ ಉಪಮುಖ್ಯಮಂತ್ರಿ ಹುದ್ದೆ ಕೊಟ್ಟು ಬಾರಿ ಅಚ್ಚರಿ ನೀಡಿತ್ತು. ಹೀಗಾಗಿ, ಬಿಜೆಪಿ ವರಿಷ್ಠರಿಗೆ ಲಕ್ಷ್ಮಣ ಸವದಿ ಅವರೆಂದರೆ ಅತ್ಯಂತ ಅಚ್ಚುಮೆಚ್ಚು ಪಕ್ಷ ಕಾಲ ಕಾಲಕ್ಕೆ ನೀಡುವ ಜವಾಬ್ದಾರಿಗಳನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸುವ ಮೂಲಕ ಅಥಣಿ ಸಾಹುಕಾರ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನ ಗೆದ್ದವರು. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಯಾವುದೇ ರಾಜ್ಯವಿರಲಿ. ಉಪಚುನಾವಣೆ ಎದುರಾದ ತಕ್ಷಣ ಬಿಜೆಪಿ ವರಿಷ್ಠರಿಗೆ ಮೊದಲು ಎದುರಾಗುವುದು ಲಕ್ಷ್ಮಣ ಸವದಿ ಅವರ ಹೆಸರು. ವಿಧಾನಸಭಾ ಉಪಚುನಾವಣೆಗಳನ್ನು ಗೆದ್ದು ಕೊಡುವ ಸರದಾರ ಎಂದೇ ಖ್ಯಾತಿ ಪಡೆದಿರುವ ಸವದಿ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆದಿರುವ ಅನೇಕ ಉಪಚುನಾವಣೆಗಳಲ್ಲಿ ಎದುರಾದ ಬಾರಿ ಸವಾಲುಗಳನ್ನು ಎದುರಿಸಿ ಆ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವಿನ ಜಯಭೇರಿ ದೊರಕಿಸಿಕೊಟ್ಟ ಹಿರಿಮೆಗೆ ಪಾತ್ರರಾದವರು. ಹೀಗಾಗಿ ಪಕ್ಷದಲ್ಲಿ ಸವದಿ ಅವರಿಗೆ ವಿಶೇಷವಾದ ಸ್ಥಾನವಿದೆ. ಚುನಾವಣೆಗಳ ಉಸ್ತುವಾರಿ, ಸಹ ಉಸ್ತುವಾರಿ ವಹಿಸಿ ಅನುಭವಿರುವ ಈ ಹಿರಿಯ ನಾಯಕ ಬಿಜೆಪಿಯ ಅತ್ಯಮೂಲ್ಯ ಆಸ್ತಿಯಾಗಿದ್ದಾರೆ. ಈ ಹಿಂದೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಗೆಲುವಿಗೆ ಅಹರ್ನಿಶಿ ಶ್ರಮಿಸಿದ್ದರು. ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ತಿಂಗಳುಗಟ್ಟಲೆ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿದ್ದರು. ಕರ್ನಾಟಕ ಮಾತ್ರವಲ್ಲ, ಅಥಣಿ ತಾಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ರಾಜಕಾರಣ ಲಕ್ಷ್ಮಣ ಸವದಿ ಅವರಿಗೆ ಇಂಚಿಂಚು ರಾಜಕೀಯ ಗೊತ್ತಿದೆ. ಅಲ್ಲಿನ ಕ್ಷೇತ್ರಗಳು, ಮತಗಳ ಪ್ರಮಾಣವೂ ಕರಗತವಾಗಿದೆ. ಆದ್ದರಿಂದ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವರಿಷ್ಠರು ದೇಶದಲ್ಲಿಯೇ ಅತ್ಯಂತ ದೊಡ್ಡ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದ ಸಹ ಉಸ್ತುವಾರಿಯನ್ನಾಗಿ ನಿಯೋಜಿಸುವ ಮೂಲಕ ಅವರಲ್ಲಿರುವ ಸಾಮರ್ಥ್ಯಕ್ಕೆ ಮಣೆ ಹಾಕಿರುವುದನ್ನು ಇಲ್ಲಿ ಗಮನಿಸಬಹುದು.

ಕಾಲಿಗೆ ಚಕ್ರ ಕಟ್ಟಿಕೊಂಡು ಸಂಚರಿಸುವ ಸಾಹುಕಾರ್: ಬಿಜೆಪಿಯ ಸಂಘಟನೆಯಲ್ಲಿ ಲಕ್ಷ್ಮಣ ಸವದಿ ಅವರು ಎತ್ತಿದ ಕೈ. ದಶಕಗಳಿಂದ ಬಿಜೆಪಿ ಕಟ್ಟಲು ಶ್ರಮಿಸುತ್ತಿರುವ ಈ ಹಿರಿಯ ನಾಯಕ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯಾದ್ಯಂತ ಸುತ್ತಾಡುತ್ತಾರೆ. ಯಾವುದೇ ವಿಶ್ರಾಂತಿಯನ್ನು ಪಡೆಯದೆ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಅತ್ಯಂತ ನಿಷ್ಠೆಯಿಂದ ಮಾಡುವ ಲಕ್ಷ್ಮಣ ಸವದಿ ಅವರು ತಿಂಗಳುಗಟ್ಟಲೆ ಪಕ್ಷ ಸಂಘಟನೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಬಿಜೆಪಿಯನ್ನು ಬೇರು ಮಟ್ಟದಲ್ಲಿ ಕಟ್ಟಲು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುವ ಅವರು ಚಾಣಕ್ಯ ನೀತಿ ಅನುಸರಿಸುತ್ತಾರೆ. ವಿಷಯವನ್ನು ಮನಮುಟ್ಟುವಂತೆ ತಿಳಿಸಿ ಹೇಳುವ ಕಲೆಯಲ್ಲಿ ಅತ್ಯಂತ ಸಿದ್ದಹಸ್ತರು. ಕಾರ್ಯಕರ್ತರಿಗೆ ಹಾಗೂ ಜನತೆಗೆ ಬಿಜೆಪಿಯ ಜನಪ್ರಿಯ ಯೋಜನೆಗಳನ್ನು ಮನವರಿಕೆ ಮಾಡುವಲ್ಲಿ ಎತ್ತಿದ ಕೈ. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿ ಚೈತನ್ಯ, ಉತ್ಸಾಹ ತುಂಬುವ ನಿಟ್ಟಿನಲ್ಲಿ ಸವದಿಯವರು ರಾಜಕೀಯ ಚಾಣಕ್ಯ ಎಂದೇ ಕರೆಯಲ್ಪಟ್ಟಿದ್ದಾರೆ.

ರಾಜ್ಯದ ಬಿಜೆಪಿ ನಾಯಕರ ಪೈಕಿ ಲಕ್ಷ್ಮಣ ಸವದಿ ಅವರು ಅಗ್ರಗಣ್ಯರಾಗಿ ಗುರುತಿಸಿಕೊಂಡಿದ್ದಾರೆ. ಅವರ ಮಾತಿಗೆ ಪಕ್ಷದಲ್ಲಿ ಬಹು ದೊಡ್ಡ ಗೌರವವಿದೆ. ಶಾಸಕರಾಗಿ, ಸಚಿವರಾಗಿ ಹಲವು ಇಲಾಖೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಹಿರಿಮೆ ಅವರಿಗಿದೆ.

ಒಟ್ಟಾರೆ, ಕರ್ನಾಟಕದ ರಾಜಕಾರಣವನ್ನು ಅರೆದು ಕುಡಿದಿರುವ ಲಕ್ಷ್ಮಣ ಸವದಿ ಅವರು ಬಿಜೆಪಿ ಪಾಲಿನ ಬಹುದೊಡ್ಡ ಆಸ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬರುವ ದಿನಗಳ ದಿನಗಳು ಲಕ್ಷ್ಮಣ ಸವದಿ ಅವರ ಪಾಲಿಗೆ ವಿಶೇಷವಾಗಿವೆ ಎನ್ನಬಹುದು. ಇಂಥ ಹಿರಿಯ ನಾಯಕನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಸಂಭ್ರಮದ ವರ್ಷದಲ್ಲಿ ಅವರಿಗೆ ಬಹುದೊಡ್ಡ ಹುದ್ದೆ ಒಲಿದು ಬರಲಿ ಎನ್ನುವುದು ಅವರನ್ನು ಪ್ರೀತಿಸುವ ನಾಡಿನ ಅಪಾರ ಜನರ ಮನದಾಳದ ಕನಸಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಮುಂದು !: ಬಿಜೆಪಿ ಸದ್ಯ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪಕ್ಷ ಎಂಬ ಹಿರಿಮೆಗೆ ಪಾತ್ರವಾಗಿದೆ. ಅತ್ಯಂತ ದೊಡ್ಡ ಸಾಮಾಜಿಕ ಜಾಲವನ್ನು ಹೊಂದಿರುವ ಬಿಜೆಪಿ ಆಧುನಿಕ ಸಂವಹನ ಮಾಧ್ಯಮಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿದೆ. ಈ ದೆಸೆಯಲ್ಲಿ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಅವರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ. ಸದ್ಯದ ಬೆಳವಣಿಗೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಅವರು ಆಯಾ ಬೆಳವಣಿಗೆಗಳ ಮೇಲೆ ಆಗಾಗ ಗಮನಹರಿಸುತ್ತಲೇ ಇರುತ್ತಾರೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ದೈನಂದಿನ ಚಟುವಟಿಕೆಗಳಾದ ಜಯಂತಿ- ಜನ್ಮದಿನ ಸೇರಿದಂತೆ ಎಲ್ಲಾ ಬೆಳವಣಿಗೆಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದರ ಜೊತೆ ಅವರು ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಜನತೆಯ ಜೊತೆ ನೇರ ಹಾಗೂ ನಿಕಟ ನಂಟು ಹೊಂದಿರುವುದು ಅವರ ಕ್ರಿಯಾಶೀಲತೆಗೆ ಹಿಡಿದ ಕೈಗಡಿಯನ್ನಬಹುದು.


Jana Jeevala
the authorJana Jeevala

Leave a Reply