ಜನ ಜೀವಾಳ ಜಾಲ; ಅಥಣಿ : ದಿನದ 24 ತಾಸು ನೀರಿನ ಸೌಲಭ್ಯ ಸಿಗಬೇಕು ಎನ್ನುವ ಅಥಣಿ ಪಟ್ಟಣದ ಜನರ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಅಥಣಿ ಕ್ಷೇತ್ರದ ಜನಮನದ ಜನಪ್ರಿಯ ನಾಯಕರು, ಮಾಜಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿಯವರ ವಿಶೇಷ ಪ್ರಯತ್ನದಿಂದ ಈ ಯೋಜನೆಗೆ ರಾಜ್ಯ ಸರ್ಕಾರದಿಂದ ಸುಮಾರು 73.50 ಕೋಟಿ ರೂ. ಮಂಜೂರಾಗಿದೆ. ಇದು ಅಥಣಿ ಪಟ್ಟಣದ ಸಮಸ್ತ ನಾಗರಿಕರಲ್ಲಿ ಸಂತಸ ಮೂಡಿಸಿದೆ.
ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಮ್ಮ ಅಥಣಿ ಕ್ಷೇತ್ರದ ಹೆಮ್ಮೆಯ ನಾಯಕ ಲಕ್ಷ್ಮಣ ಸವದಿಯವರಿಗೆ ಅಥಣಿ ಪಟ್ಟಣದ ಸಮಸ್ತ ಜನತೆ ಹಾಗೂ ಲಕ್ಷ್ಮಣ ಸವದಿಯವರ ಸಮಸ್ತ ಅಭಿಮಾನಿ ಬಳಗ ಇದೀಗ ಸಂತಸ ಸೂಚಿಸುತ್ತಿದೆ.
ಸವದಿಯವರ ಭಗೀರಥ ಪ್ರಯತ್ನ : ಎರಡು ದಶಕಗಳ ಹಿಂದಿನ ಮಾತು. ಲಕ್ಷ್ಮಣ ಸವದಿ ಅವರು ಮೊದಲ ಬಾರಿಗೆ ಅಥಣಿ ಮತ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದರು. ಅಂದಿನಿಂದ ಇಡೀ ಅಥಣಿ ಮತಕ್ಷೇತ್ರದ ಒಟ್ಟಾರೆ ಚಿತ್ರಣವೇ ಬದಲಾಯಿತು. ಯಾಕೆಂದರೆ ತಮ್ಮ ಮತಕ್ಷೇತ್ರ ಅಭಿವೃದ್ಧಿ ಸಾಧಿಸಬೇಕು ಎಂಬ ಏಕೈಕ ಛಲದಿಂದ ಲಕ್ಷ್ಮಣ ಸವದಿ ಅವರು ಒಂದೊಂದೇ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ಸದ್ದಿಲ್ಲದೆ ತರಲು ಪ್ರಯತ್ನಿಸಿದರು. ಅವರ ಅವಿರತ ಪರಿಶ್ರಮದ ಫಲವಾಗಿ ಅಥಣಿ ಮತಕ್ಷೇತ್ರ ಇಂದು ಸಾಕಷ್ಟು ಅಭಿವೃದ್ದಿ ಪರ ಯೋಜನೆಗಳಿಂದ ನಳನಳಿಸುತ್ತಿದೆ.
ಮೂಲಭೂತ ಸೌಲಭ್ಯಗಳಿಂದ ತೀವ್ರ ನರಳಿ ಹೋದ ಅಥಣಿ ಮತಕ್ಷೇತ್ರ ಇದೀಗ ಸಮಗ್ರ ಅಭಿವೃದ್ಧಿ ಪರಿಕಲ್ಪನೆಯೊಂದಿಗೆ
ಮುನ್ನಡೆಯುತ್ತಿದೆ. ಲಕ್ಷ್ಮಣ ಸವದಿ ಅವರು ವಿಧಾನ ಸಭಾ ಸದಸ್ಯರಲ್ಲದೇ ಇರಬಹುದು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ತಮ್ಮನ್ನು ಸೋಲಿಸಿದರೂ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸಮಗ್ರ ಅಥಣಿ ತಾಲ್ಲೂಕಿನ ಅಭಿವೃದ್ಧಿಯ ಸಂಕಲ್ಪದಿಂದ ರಾಜ್ಯ ಸರಕಾರದ ಮಟ್ಟದಲ್ಲಿ ಬಹಳ ಪ್ರಭಾವಶಾಲಿ ಯಾಗಿ ಕೆಲಸ ಮಾಡುತ್ತಿರುವುದು ಅಥಣಿ ತಾಲ್ಲೂಕಿನ ಮತದಾರರ ಸುದೈವ ಎಂದೇ ಹೇಳಬಹುದು.
ಇದೀಗ ಲಕ್ಷ್ಮಣ ಸವದಿ ಅವರು ಅಥಣಿ ಪಟ್ಟಣಕ್ಕೆ ದಿನದ 24 ಗಂಟೆಗಳ ಕಾಲ ನೀರು ಪೂರೈಸುವ ಮಹತ್ವದ ಸಂಕಲ್ಪ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಚಿವರು ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡುವ ಮೂಲಕ ತಮ್ಮ ತವರಿಗೆ ವಿಶೇಷವಾದ ಕೊಡುಗೆಯನ್ನು ತಂದಿರುವುದು ಮಾನನೀಯ ಕಾರ್ಯವಾಗಿದೆ.
ಒಟ್ಟಾರೆ ಗಮನಿಸುವುದಾದರೆ ಅಥಣಿ ಮತಕ್ಷೇತ್ರದ ಜನರ ಬಹುದಿನಗಳ ಈ ಬೇಡಿಕೆಗೆ ಲಕ್ಷ್ಮಣ ಸವದಿ ಅವರು ಸ್ಪಂದಿಸಿ ರಾಜ್ಯ ಸರಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಯೋಜನೆಯನ್ನು ಜಾರಿಗೊಳಿಸಿರುವುದು ಅತ್ಯಂತ ಸ್ತುತ್ಯಾರ್ಹ ಕಾರ್ಯವಾಗಿದೆ.