ಬೆಳಗಾವಿ: ಮುರಿಗೇಶ್ ಎಚ್. ಎಂ. ಅವರು ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ‘ಸ್ಪೆಷಲ್ ಎಕನಾಮಿಕ್ ಜೋನ್ ಆ್ಯಂಡ್ ಇಟ್ಸ್ ಇಂಪ್ಯಾಕ್ಟ್ ಆನ್ ಎಕನಾಮಿಕ್ ಡೆವಲಪ್ ಮೆಂಟ್ – ಎ ಕೇಸ್ ಸ್ಟಡಿ ಆಫ್ ಎಸ್ ಇ ಝಡ್ ಬೆಳಗಾವಿ’ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಹೆಚ್ ಡಿ ಪದವಿ ಪ್ರದಾನ ಮಾಡಿದೆ. ಪ್ರಸ್ತುತ ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್. ಬಿ. ಆಕಾಶ ಅವರು ಮಾರ್ಗದರ್ಶಕರಾಗಿದ್ದರು.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಕುಲ ಸಚಿವ ಮುರಿಗೇಶ್ ಎಚ್.ಎಂ. ಅವರಿಗೆ ಪಿ ಎಚ್ ಡಿ ಪದವಿ
