ಬೆಂಗಳೂರು :
ಪ್ರಸಕ್ತ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ 5,8, 9ನೇ ತರಗತಿಯ ಸಂಕಲನಾತ್ಮಕ ಮೌಲ್ಯಮಾಪನ-2 ಮತ್ತು 11ನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಅನುಮತಿ ನೀಡಿ ಗೆಜೆಟ್ ಅಧಿಸೂಚನೆಯನ್ನು ರಾಜ್ಯಪಾಲರು ಹೊರಡಿಸಿದ್ದಾರೆ. ಪ್ರತಿವರ್ಷ ಸಂಕಲನಾತ್ಮಕ ಮೌಲ್ಯಮಾಪನ ಮತ್ತು ವಾರ್ಷಿಕ ಪರೀಕ್ಷೆಯನ್ನು ನಡೆಸುವ ಸಂಬಂಧ ಸರ್ಕಾರಿ ಆದೇಶ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.