ಬೆಳಗಾವಿ : ಕೆಎಲ್ ಇ ಸಂಸ್ಥೆಯನ್ನು ಜಗದಗಲ ಬೆಳೆಸಿದ್ದ ಪ್ರತಿಷ್ಠಿತ ಕರ್ನಾಟಕ ಲಿಂಗಾಯಿತ ಎಜುಕೇಶನ್ ಸೊಸೈಟಿಯ ಚೇರ್ಮನ್ ಹುದ್ದೆಯಿಂದ ಡಾ. ಪ್ರಭಾಕರ ಕೋರೆ ಅವರು ಈಗ ಕೆಳಗಿಳಿದಿದ್ದಾರೆ. ಬೇರೆಯವರಿಗೆ ಅವಕಾಶ ಮಾಡಿಕೊಡುವ ಮೂಲಕ ಇದೀಗ ಪ್ರಭಾಕರ ಕೋರೆ ಅವರು ಮಹಾತ್ಯಾಗಿ ಎಂದು ಕರೆಸಿಕೊಂಡಿದ್ದಾರೆ. ಸುದೀರ್ಘ ಅವರಿಗೆ ಚೇರಮನ್ ಎಂಬ ಹಿರಿಮೆಗೆ ಪಾತ್ರರಾಗಿದ್ದ ಅವರು ಏಕಾಏಕಿಯಾಗಿ ಜಾಗತಿಕ ಹಿರಿಮೆಯ ಸಂಸ್ಥೆಯ ಚೇರ್ಮನ್ ಹುದ್ದೆಯನ್ನು ಬಿಟ್ಟು ಕೊಡುವ ಮೂಲಕ ಇತರರಿಗೆ ಆದರ್ಶ ಪ್ರಾಯರಾಗಿದ್ದಾರೆ.
40 ವರ್ಷಗಳ ಕಾಲ ಕೆಎಲ್ ಇ ಸಂಸ್ಥೆಗೆ ಜಾಗತಿಕ ಮನ್ನಣೆ ತಂದುಕೊಟ್ಟು ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನಾಗಿಸಿದ್ದ ಹಿರಿಮೆ ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ.
ಗುರುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ತಮ್ಮ ನಾಮಪತ್ರವನ್ನು ಹಿಂಪಡೆದುಕೊಳ್ಳುವ ಮೂಲಕ ಅವರು 1985 ರಿಂದ ಅಲಂಕರಿಸಿದ್ದ ಈ ಪ್ರತಿಷ್ಠಿತ ಹುದ್ದೆಯನ್ನು ಈಗ ಬಿಟ್ಟು ಕೊಟ್ಟಿದ್ದಾರೆ.
ಡಾ. ಪ್ರಭಾಕರ ಕೋರೆಯವರು ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದರಿಂದ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಾ.ಪ್ರಭಾಕರ ಕೋರೆಯವರ ಸುಪುತ್ರಿ ಡಾ. ಪ್ರೀತಿ ದೊಡವಾಡ ನೂತನ ನಿರ್ದೇಶಕ ಮಂಡಳಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಸುಪುತ್ರ ಅಮಿತ್ ಕೋರೆ ಅವರು ಮುಂದುವರಿದಿದ್ದಾರೆ.
ಈ ಪ್ರತಿಷ್ಠಿತ ಸಂಸ್ಥೆಯನ್ನು ಮೂವರು ಮಹಾದಾನಿಗಳ ಜೊತೆಗೆ ಸಪ್ತ ಋಷಿಗಳು ಹುಟ್ಟು ಹಾಕಿದ್ದರು. ಆದರೆ ಆಧುನಿಕ ಕಾಲದಲ್ಲಿ ಈ ಸಂಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಗೆ ಪ್ರಭಾಕರ ಕೋರೆ ಅವರಿಗೆ ಸಲ್ಲುತ್ತದೆ. ಈ ಮೂಲಕ ಅವರು ಅಷ್ಟಮ ಋಷಿ ಎಂದೇ ಕರೆಸಿಕೊಂಡಿದ್ದಾರೆ. ಅವರು ಮಾಡಿರುವ ಕೆಲಸ ಇಡೀ ಕನ್ನಡ ನಾಡಿಗೆ ಮಾದರಿಯಂತಿದೆ. ಸೀಮಿತ ಸಂಖ್ಯೆಗೆ ಸೀಮಿತವಾಗಿದ್ದ ಸಂಸ್ಥೆಯನ್ನು ತ್ರಿಶತಕ ಮೀರಿಸುವ ಸಂಸ್ಥೆಯನ್ನಾಗಿ ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
ಅವರ ಬಲಿಷ್ಠ ನಾಯಕತ್ವ, ಭವಿಷ್ಯದಲ್ಲಿ ಎಂಥ ಶಿಕ್ಷಣ ಬೇಕು ಮುಂತಾದವುಗಳ ನೆಲೆಯಿಂದ ಕೆಎಲ್ ಇ ಸದಾ ಯಶಸ್ಸಿನ ಹಾದಿಯಲ್ಲಿ ಪಯಣಿಸಿತು. ತಮ್ಮ ಈ ಅವಧಿಯಲ್ಲಿ ದೇಶದ ಪ್ರತಿಷ್ಠಿತರನ್ನೇ ಸಂಸ್ಥೆಗೆ ಕರೆತಂದು ಇಡೀ ನಾಡು ಬೆಳಗಾವಿ ಕಡೆ ನೋಡುವಂತೆ ಮಾಡಿರುವ ಸಾಧನೆ ಸಣ್ಣದೇನಲ್ಲ. ಪ್ರಭಾಕರ ಕೋರೆ ಅವರು ಈಗ ಚೇರಮನ್ ಸ್ಥಾನ ಸ್ಥಾನ ತ್ಯಜಿಸಿಬಹುದು. ಆದರೆ ಅವರು ಸಂಸ್ಥೆಗೆ ಅನಿವಾರ್ಯವಾಗಿದ್ದಾರೆ. ಮುಂದಿನ ದಿನಗಳಲ್ಲೂ ಸಹ ಅವರು ಹಿರಿಯ ಮಾರ್ಗದರ್ಶಕರಾಗಿ ಸಂಸ್ಥೆಯನ್ನು ಮುನ್ನಡೆಸುವ ಮೂಲಕ ಸದಾ ಬೆನ್ನೆಲುಬಾಗಿ ನಿಲ್ಲಬೇಕು ಎನ್ನುವುದು ನಾಡಿನ ಜನತೆಯ ಒತ್ತಾಸೆಯಾಗಿದೆ.
ಕೆಎಲ್ ಇ ಸಂಸ್ಥೆಯನ್ನು ಜಗದಗಲ ಬೆಳೆಸಿದ ಅಷ್ಟಮ ಋಷಿ ಮಹಾತ್ಯಾಗಿ ಡಾ.ಪ್ರಭಾಕರ ಕೋರೆ


