ಬೆಳಗಾವಿ :
ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕನ್ನಡ ಜನಶಕ್ತಿ ಕೇಂದ್ರವು ಕಳೆದ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಾಲ್ವರು ಗಡಿ ಹೋರಾಟಗಾರಿಗೆ ಸುವರ್ಣ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕೋಲಾರದ ಅ. ಕೃ. ಸೋಮಶೇಖರ, ಚಾಮರಾಜನಗರದ ಚಾ.ರಂ. ಶ್ರೀನಿವಾಸಗೌಡ, ಬೆಳಗಾವಿಯ ಅಶೋಕ ಚಂದರಗಿ, ಬಸವಕಲ್ಯಾಣದ ಕೆ.ಜಿ. ಶರಣಪ್ಪ ಗದಲೇಗಾಂವ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು. ಕನ್ನಡ ಜನಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಿ. ಪುಟ್ಟರಾಜು, ಅಧ್ಯಕ್ಷ ಸಿ. ಕೆ. ರಾಮೇಗೌಡ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜಪ್ಪ ದಳವಾಯಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್. ಎಲ್. ಪುಷ್ಪಾ, ಸಾಹಿತಿ ಪಿ. ಮಲ್ಲಿಕಾರ್ಜುನಪ್ಪ, ಕಾರ್ಯಕ್ರಮ ಉದ್ಘಾಟಕ ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಉಪಸ್ಥಿತರಿದ್ದರು.