ಬೆಳಗಾವಿ :
ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿನ ವತಿಯಿಂದ ಗ್ರಾಹಕರ ಸಮಾವೇಶ ಮತ್ತು ಕಾಯಕ ಕಟ್ಟೆಯ ಮಹಿಳಾ ಉದ್ದಿಮೆದಾರರ ಬಳಗದವರಿಂದ ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ಗೃಹ ಕೈಗಾರಿಕೆಯಲ್ಲಿ ತಯಾರಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸೋಮವಾರ ಕನ್ನಡ ಸಾಹಿತ್ಯ ಭವನದಲ್ಲಿ ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಉದ್ಘಾಟಿಸಿದರು.
ಅವರು ಈ ಸಂದರ್ಭದಲ್ಲಿ ಮಾತನಾಡಿ, ಕಳೆದ 25 ವರ್ಷಗಳಿಂದ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕು 8 ಶಾಖೆಗಳೊಂದಿಗೆ ತನ್ನ ಗ್ರಾಹಕರಿಗೆ ಉತ್ಕೃಷ್ಠ ಸೇವೆ ಸಲ್ಲಿಸುತ್ತಾ ಇದೆ. ವಿಶೇಷವಾಗಿ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಸಣ್ಣ ಮತ್ತು ಮಧ್ಯಮ ಮಹಿಳಾ ಉದ್ದಮೆದಾರರಿಗೆ ವಿವಿಧ ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿದೆ. ತನ್ನ ಹಲವಾರು ಚಟುವಟಿಕೆಗಳಿಂದ ಗ್ರಾಹಕರ ಮನಸೂರೆಗೊಂಡಿದೆ ಎಂದು ಹೇಳಿದರು.
ಗ್ರಾಹಕರ ಸಮ್ಮೇಳನ ಮತ್ತು ಮಾರಾಟ ಮೇಳ ವ್ಯವಸ್ಥಿತವಾಗಿ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿ, ಗೃಹ ಕೈಗಾರಿಕೆಯಲ್ಲಿ ತಯಾರಾದ ವಸ್ತುಗಳನ್ನು ಖರೀದಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಬ್ಯಾಂಕಿನ ನಿರ್ದೇಶಕಿ ರತ್ನಪ್ರಭಾ ಬೆಲ್ಲದ ಇವರು ಬ್ಯಾಂಕಿನ ವಿವಿಧ ಸೇವೆಗಳ ಬಳಕೆ ಬಗ್ಗೆ ಹಾಗೂ ಕಾಯಕ ಕಟ್ಟೆಯ ಮಹಿಳಾ ಉದ್ಯಮಿದಾರರ ಗೃಹ ಕೈಗಾರಿಕೆಯಲ್ಲಿ ತಯಾರಾದ ವಸ್ತುಗಳ ಬಗ್ಗೆ ಗ್ರಾಹಕರಿಗೆ ತಿಳಿಸಿದರು.
ಕಾಯಕ ಕಟ್ಟೆಯ ಪ್ರಧಾನ ವ್ಯವಸ್ಥಾಪಕಿ ಆಶಾ ಯಮಕನಮರಡಿ ಇವರು ಗೃಹ ಕೈಗಾರಿಕೆಯಲ್ಲಿ ತಯಾರಾದ ವಸ್ತುಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಕೊಟ್ಟರು.
ಪ್ರದರ್ಶನದಲ್ಲಿ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಸಕ್ರೀಯವಾಗಿ ಭಾಗವಹಿಸಿದ್ದರು.