ಬೆಂಗಳೂರು : ಅಕ್ಟೋಬರ್ 15ರಿಂದ ಪ್ರತಿ ಕೆಜಿ ಕಾಫಿ ಪುಡಿ ಮೇಲೆ ನೂರು ರೂಪಾಯಿ ಹೆಚ್ಚಳವಾಗಲಿದೆ ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಷನ್ ತಿಳಿಸಿದೆ. ಕಾಫಿ ಪುಡಿ ಬೆಲೆ ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ಅಸೋಸಿಯೇಶನ್ ತಿಳಿಸಿದೆ. ಅಸೋಸಿಯೇಷನ್ ಅಧ್ಯಕ್ಷ ಪೆರಿಕಲ್ ಸುಂದರ್ ಮಾತನಾಡಿ, ಶ್ರೇಷ್ಠ ಗುಣಮಟ್ಟದ ಕಾಫಿ ಬೀಜ ದೊರೆಯುತ್ತಿಲ್ಲ. ಇದರ ಜೊತೆಗೆ ಉತ್ಪಾದನಾ ನಿರ್ವಹಣೆ ಹೆಚ್ಚಾಗುತ್ತಿದೆ. ಕಾಫಿ ಪುಡಿ ಮಾರಾಟದ ಪ್ರತಿ ಕೆಜಿ ಮೇಲೆ ನೂರು ರೂಪಾಯಿ ಹೆಚ್ಚಳ ಮಾಡಲು ಅಸೋಸಿಯೇಷನ್ ನಿರ್ಧರಿಸಿದೆ. ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದರು.
ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಯ ಗುಣಮಟ್ಟ ಮತ್ತು ಕಾಫಿ ಬೆಳೆಯುವಲ್ಲಿ ಗಣನೀಯ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿದಿನ ಕಾಫಿ ಬೆಲೆಯಲ್ಲಿ ಈಗ ಶೇಕಡ 20ರಷ್ಟು ಕುಸಿತವಾಗಿದ್ದು ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದ ಸ್ಥಳೀಯ ಮಾರುಕಟ್ಟೆಗೆ ಕಾಫಿ ಪೂರೈಕೆ ಕಡಿಮೆಯಾಗಿದ್ದು ಬೆಲೆ ಏರಿಕೆ ಉಂಟಾಗಿದೆ. ಜನವರಿ ಆರಂಭದಿಂದ ಬೆಲೆ ಹೆಚ್ಚಳವಾಗುತ್ತಿದ್ದು ಪ್ರತಿ ಕೆಜಿಗೆ ಇನ್ನೂರು ಇದ್ದ ಒಂದು ಕೆಜಿ ರೋಬಸ್ಟಾ ತಳಿಯ ಕಾಫಿ ಬೆಲೆ ಈಗ 420 ಕ್ಕೆ ಏರಿಕೆಯಾಗಿದೆ ಅರೇಬಿಕಾ ತಳಿ ಕಾಫಿ ಬೆಲೆ ಇನ್ನೂ 290 ರಿಂದ ರುಪಾಯಿ 465 ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.