ಬೆಳಗಾವಿಯ ಸುಪ್ರಸಿದ್ಧ ಬಂಗಾರ ಹಾಗೂ ಪೇಪರ್ಸ ಒಡೆಯರಾದ ವಿಜಯ ಸಾಂಘ್ವಿಯವರ ಪುತ್ರಿ ಆರ್ಯ ಸಾಂಘ್ವಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 617 ಅಂಕಗಳನ್ನು (98.4%)ಪಡೆಯುವ ಮೂಲಕ ಉತ್ತೀರ್ಣರಾಗಿದ್ದಾರೆ.
ಬೆಳಗಾವಿಯ ಡಿಪಿ ಶಾಲೆಯ ವಿದ್ಯಾರ್ಥಿನಿಯಾದ ಇವಳು ಶಾಲೆಗೆ ಪ್ರಥಮ ಸ್ಥಾನ ಗಳಿಸಿ ಶಾಲೆಗೆ ಹಾಗೂ ಸಾಂಘ್ವಿ ಕುಟುಂಬಕ್ಕೆ ಕೀರ್ತಿ ತಂದಿದ್ದಾಳೆ. ಜನ ಜೀವಾಳ ದೊಂದಿಗೆ ಮಾತನಾಡಿ ಆರ್ಯ ತಾನು ಮುಂಬರುವ ಉನ್ನತ ಸಾಧನೆ ಮಾಡುವ ಹೆಬ್ಬಯಕೆ ಹೊಂದಿದ್ದೇನೆ ಎಂದಳು.
ಅವಳ ಸಾಧನೆಗೆ ಶಾಲೆಯ ಮುಖ್ಯಾಪಾಧ್ಯಾಯರು, ಶಿಕ್ಷಕ ಸಿಬ್ಬಂದಿ ಅಭಿನಂದಿಸಿದ್ದಾರೆ.