ನವದೆಹಲಿ : ಗುರುಗ್ರಾಮದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆಯಾಗಿರುವ ಹಿನ್ನೆಲೆಯಲ್ಲಿ ನಗರದ ವಸತಿ ಸಮುಚ್ಚಯವೊಂದು ವಾಯು ಮಾಲಿನ್ಯವನ್ನು ತಡೆಯಲು ವಿಶಿಷ್ಟ ವಿಧಾನವನ್ನು ಆರಿಸಿಕೊಂಡಿದೆ.
ಸೆಕ್ಟರ್ 82 ರಲ್ಲಿ ಡಿಎಲ್ಎಫ್ (DLF) ಪ್ರೈಮಸ್ ಅಪಾರ್ಟ್ಮೆಂಟ್ ಧೂಳು ಮತ್ತು ಕಣಗಳಿಂದ ಕೂಡಿದ ವಾಯು ಮಾಲಿನ್ಯ ನಿಯಂತ್ರಿಸಲು ಅಗ್ನಿಶಾಮಕ ಕಾರ್ಯಾಚರಣೆಗಳಲ್ಲಿ ಬಳಸುವ ಸ್ಪ್ರಿಂಕ್ಲರ್ಗಳು ಮತ್ತು ನೀರಿನ ಪೈಪ್ಗಳನ್ನು ಬಳಸಿಕೊಂಡು ಅಪಾರ್ಟ್ಮೆಂಟ್ ಸುತ್ತಲು “ಕೃತಕ ಮಳೆ” ಸುರಿಸಿವೆ. ಗುರುವಾರದ ವೀಡಿಯೊವು ಸಂಕೀರ್ಣದ 32 ಮಹಡಿಗಳ ಎತ್ತರದ ಗೋಪುರಗಳಿಂದ ಮಳೆಯ ರೂಪದಲ್ಲಿ ನೀರು ಬೀಳುತ್ತಿರುವುದನ್ನು ತೋರಿಸುತ್ತದೆ.
ಕಾಂಪ್ಲೆಕ್ಸ್ನ ನಿವಾಸಿ ಕಲ್ಯಾಣ ಸಂಘದ (RWA) ಅಧ್ಯಕ್ಷ ಅಚಲ ಯಾದವ್ ಅವರು, ಮಾಲಿನ್ಯವನ್ನು ಸರ್ಕಾರದಿಂದ ಮಾತ್ರ ನಿಯಂತ್ರಿಸಲು ಸಾಧ್ಯವಿಲ್ಲದ ಕಾರಣ ನಿವಾಸಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಅಗತ್ಯ ಬಿದ್ದರೆ ಎಕ್ಯೂಐ ಆಧರಿಸಿ ಪ್ರತಿದಿನ ಕೃತಕ ಮಳೆ ಸುರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ವಾಯು ಮಾಲಿನ್ಯವು ಗಂಭೀರ ಸಮಸ್ಯೆಯಾಗುತ್ತಿದೆ ಮತ್ತು ಇದನ್ನು ಸರ್ಕಾರದಿಂದ ಮಾತ್ರ ನಿಯಂತ್ರಿಸಲಾಗುವುದಿಲ್ಲ. ಗುರುಗ್ರಾಮದ ಪ್ರತಿಯೊಬ್ಬ ನಿವಾಸಿಗಳು ಸಹ ಇದರ ನಿಯಂತ್ರಣಕ್ಕೆ ಕೊಡುಗೆ ನೀಡಬೇಕು. ನಾವು ನಮ್ಮ 32-ಅಂತಸ್ತಿನ ಅಪಾರ್ಟ್ಮೆಂಟಿನಿಂದ ಕೃತಕ ಮಳೆ ಸುರಿಸಲು ಅಗ್ನಿಶಾಮಕ ಸ್ಪ್ರಿಂಕ್ಲರ್ಗಳು ಮತ್ತು ನೀರಿನ ಪೈಪ್ಗಳನ್ನು ಬಳಸುತ್ತಿದ್ದೇವೆ. ಇದರಿಂದ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿರುವ ಕನಿಷ್ಠ ಧೂಳು ಮತ್ತು ಇತರ ಕಣಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು AQI ಅನ್ನು ಅವಲಂಬಿಸಿ, ಅಗತ್ಯವಿದ್ದರೆ ನಾವು ಇದನ್ನು ಪ್ರತಿದಿನ ಇದನ್ನು ಮಾಡಲು ಸಿದ್ಧರಿದ್ದೇವೆ ಎಂದು ಎಂದು ಅವರು ಹೇಳಿದರು.
ಸೈಬರ್ ಸಿಟಿ, ದೆಹಲಿ ಮತ್ತು ಇತರ ಪ್ರದೇಶಗಳಿಗೆ ಹೋಗುವ ನಿವಾಸಿಗಳಿಗೆ ಕಾರ್ಪೂಲ್ ಸೇವೆಯನ್ನು ಪ್ರಾರಂಭಿಸುವುದು ವಸತಿ ಸಂಕೀರ್ಣದಿಂದ ತೆಗೆದುಕೊಂಡ ಇತರ ಕೆಲವು ಕ್ರಮಗಳಲ್ಲಿ ಸೇರಿದೆ ಎಂದು ಯಾದವ್ ಹೇಳಿದರು. ಇತರ ಸಂಕೀರ್ಣಗಳ ನಿವಾಸಿಗಳು ಸಹ ಸೇವೆ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.
ಸಿಲ್ವರ್ ಅಯೋಡೈಡ್ ಮತ್ತು ಡ್ರೈ ಐಸ್ನಂತಹ ವಸ್ತುಗಳನ್ನು ಮಳೆಯನ್ನು ಹೆಚ್ಚಿಸಲು ವಾತಾವರಣಕ್ಕೆ ಹರಡುವ ಮೂಲಕ ಮೋಡ ಬಿತ್ತನೆ ಎಂದು ಕರೆಯಲ್ಪಡುವ ಕೃತಕ ಮಳೆಯನ್ನು ಸುರಿಸಲಾಗುತ್ತದೆ. ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಈ ವಾರ ಎಎಪಿ ಸರ್ಕಾರವು ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಕೃತಕ ಮಳೆಯನ್ನು ಸುರಿಸುವುದನ್ನು ಬಳಕೆ ಮಾಡುವುದನ್ನು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ.