ಬೆಳಗಾವಿ :
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೃತಕ ಆಭರಣಗಳ ತಯಾರಿಕೆಯ ೧೩ ದಿನಗಳ ತರಬೇತಿ ಮತ್ತು ಕೋಳಿ ಸಾಕಾಣಿಕೆ ೧೦ ದಿನಗಳ ತರಬೇತಿ ನೀಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಹತೆಗಳು: ೧೮ ರಿಂದ ೪೫ ವಯಸ್ಸಿನವರಾಗಿರಬೇಕು, ಗಾಮೀಣ ಪ್ರದೇಶದವರಾಗಿರಬೇಕು, ಜಾಬ್ ಕಾರ್ಡ ಹೊಂದಿರಬೇಕು.
ದಾಖಲೆಗಳು: ಜಾಬ್ ಕಾರ್ಡ್, ಆಧಾರ ಕಾರ್ಡ,ಬ್ಯಾಂಕ ಪಾಸ್ ಬುಕ್, ೩ ಭಾವಚಿತ್ರಗಳುನ್ನು ಸಲ್ಲಿಸಬೇಕು. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.
ತರಬೇತಿಗೆ ಅರ್ಜಿ ನೀಡುವವರು ಕೃತಕ ಆಭರಣಗಳ ತಯಾರಿಕೆ ಮತ್ತು ಕೋಳಿ ಸಾಕಾಣಿಕೆ, ಈ ಎರಡು ತರಬೇತಿಯಲ್ಲಿ ಒಂದು ತರಬೇತಿಗೆ ಅರ್ಜಿ ನೀಡುಬಹುದು.
ಜು.16 ರ ಒಳಗಾಗಿ ಅರ್ಜಿಯನ್ನು ಸಂಸ್ಥೆಯ ಅರ್ಜಿ ನಮೂನೆಯಲ್ಲಿ ಅಥವಾ ಬಿಳಿಹಾಳಿಯಲ್ಲಿ ನೇರವಾಗಿ ಕಾರ್ಯಾಲಯಕ್ಕೆ, ಪೋಸ್ಟ್ ಮುಖಾಂತರ ಅಥವಾ ಇಮೇಲ್ ಕಳುಹಿಸಬಹುದಾಗಿದೆ.
ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕರಿಗೆ, ನಿರುದ್ಯೋಗಿಗಳಿಗೆ, ಮತ್ತು ಮಹಿಳಾ ನಿರುದ್ಯೋಗಿಗಳಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್ಸೆಟಿ), ಪ್ಲಾಟ್ ನಂ. ಸಿ ಎ-೦೩ (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಏರಿಯಾ, ಆಟೋ ನಗರ. – ೫೯೦೦೧೫ ಅಥವಾ ದೂರವಾಣಿ ಸಂಪರ್ಕ ಸಂಖ್ಯೆ: ೦೮೩೧-೨೪೪೦೬೪೪, ೮೨೯೬೭೯೨೧೬೬, ೯೮೪೫೭೫೦೦೪೩, ೮೮೬೭೩೮೮೯೦೬, ೮೦೫೦೪೦೬೮೬೬, ೯೪೪೯೮೬೦೫೬೪ ನಂ. ಗೆ ಬೆಳ್ಳಿಗ್ಗೆ ೯.೩೦ ರಿಂದ ಸಾಯಂಕಾಲ ೬. ಗಂಟೆ ವರೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.