ಬೆಳಗಾವಿ : ಬಹು ದಿನಗಳಿಂದ ಬಾಕಿ ಇರುವ ಪ್ರಕರಣಗಳ ದಾಖಲೆ ಪುಸ್ತಕ (Long pending register) ಎಲ್ ಪಿ ಆರ್ ಕೇಸ್ ಪತ್ತೆ ಹಚ್ಚಿರುವ ಸಂಕೇಶ್ವರ ಪೊಲೀಸರು ಜಾಮೀನಿನ ಮೇಲೆ ಹೊರಬಂದು ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 32 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಒಟ್ಟು 4 ಜನ ಆರೋಪಿತರ ಪೈಕಿ ಮೂವರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಕೇಶ್ವರ ಪೊಲೀಸ್ ಠಾಣೆಯ ಸಿ.ಆರ್ ನಂಬರ್ 190/1993 ಕಲಂ 323, 326 ಜೊತೆಗೆ 34 ಐಪಿಸಿ ನೇದರಲ್ಲಿ ಪೊಲೀಸರಿಂದ ಬಂಧನದ ನಂತರ 32 ವರ್ಷಗಳಿಂದ ನ್ಯಾಯಾಲಯದಿಂದ ಜಾಮೀನರ ಮೇಲೆ ಹೊರಬಂದು ಪರಾರಿಯಾಗಿದ್ದ ನಾರಾಯಣ ಲಾಲ್ ಹೀರಾ ಲಾಲ್ ಗುಜ್ಜರ್, (50) (ಗ್ರಾಮ ರೋಜಿ ಮಂಗ್ರಿ ಖೇಡ, ಬಿಲ್ವಾರ ಜಿಲ್ಲೆ ರಾಜಸ್ಥಾನ ರಾಜ್ಯ) ಹಾಗೂ ಸುಖ ಲಾಲ್ ಚೌಗಾಲಾಲ್ ಗುಜ್ಜರ್,( 50)( ಗ್ರಾಮ ಕರಣಗಡ್, ಬಿಲ್ವಾರ ಜಿಲ್ಲೆ, ರಾಜಸ್ಥಾನ ರಾಜ್ಯ) ಮತ್ತು ಲಕಾರಂ ಚೌಗಾಲಾಲ್ ಗುಜ್ಜರ್, (52) ವರ್ಷ, ಗ್ರಾಮ ಕರಣಗಡ್, ಬಿಲ್ವಾರ ಜಿಲ್ಲೆ, ರಾಜಸ್ಥಾನ ರಾಜ್ಯ) ಈ ಮೂವರನ್ನು ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ.
ಇವರನ್ನು ಠಾಣೆಯ ಎ ಎಸ್ ಐ ಸಿ ಜೆ ಸಾರಾಪುರೆ ಮತ್ತು ಠಾಣಾ ಹೆಚ್.ಸಿ 1649 ಎಸ್. ಆರ್. ಬೇವಿನಕಟ್ಟಿ ಇವರನ್ನೊಳಗೊಂಡ ಪೊಲೀಸ್ ತಂಡವು ಎಲ್ ಪಿ ಆರ್ ವಾರಂಟ್ ಮೇಲೆ ರಾಜಸ್ಥಾನದಿಂದ ತಪಾಸಣೆ ನಡೆಸಿ ಬಂಧಿಸಿದ್ದಾರೆ.
ಬಳಿಕ ಆರೋಪಿತರನ್ನು ವಿಚಾರಣೆಗೆ ಒಳಪಡಿಸಿ, ವೈದ್ಯಕೀಯ ಪರೀಕ್ಷೆ ಮಾಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಲಾಗಿದೆ ಎಂದು ಸಂಕೇಶ್ವರ ಸಿಪಿಐ ಶಿವಶರಣ ಅವಜಿ ಅವರು ತಿಳಿಸಿದ್ದಾರೆ.
ಸಂಕೇಶ್ವರ ಪಟ್ಟಣದಲ್ಲಿ 32 ವರ್ಷಗಳ ಹಿಂದೆ ಅಂದರೆ ಕಳೆದ 1993ರಲ್ಲಿ ರಾಜಸ್ಥಾನ ಮೂಲದ ನಾಲ್ವರು ಐಸ್ ಕ್ರಿಮ್ ಅಂಗಡಿಗಳನ್ನು ನಡೆಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಈ ನಾಲ್ವರಲ್ಲಿ ಐಸ್ ಕ್ರಿಮ್ ಬೆಲೆಗಳ ಕುರಿತು ನಾಲ್ವರಲ್ಲಿ ಹೊಡೆದಾಟ ನಡೆದು ಬಳಿಕ ಬಹು ದಿನಗಳಿಂದ ಬಾಕಿ ಇರುವ ಪ್ರಕರಣಗಳ ದಾಖಲೆ ಪುಸ್ತಕ (Long pending register) ಎಲ್ ಪಿ ಆರ್ ಕೇಸ್ ಅಡಿಯಲ್ಲಿ ನಾಲ್ವರನ್ನು 32 ವರ್ಷಗಳ ಹಿಂದೆ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ಸಂಕೇಶ್ವರ ಪೊಲೀಸರ ತಂಡವು ನಾಪತ್ತೆಯಾಗಿದ್ದ ನಾಲ್ವರ ಪೈಕಿ ಮೂವರನ್ನು ರಾಜಸ್ಥಾನದಿಂದ ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.