This is the title of the web page
This is the title of the web page

Live Stream

April 2023
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಅಪ್ಪು ಒಬ್ಬ ಅಪರೂಪದ ನಟ, ಸಮಾಜ ಸೇವಕ – ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ Appu is a rare actor, social worker - MLA Lakshmi Hebbalkar


 

ಬೆಳಗಾವಿ :
ದಿವಂಗತ ಪುನೀತ್ ರಾಜಕುಮಾರ್ ಅವರು ಒಬ್ಬ ಅಪರೂಪದ ನಟ ಮತ್ತು ಅಪರೂಪದ
ಸಮಾಜ ಸೇವಕ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್
ಹೇಳಿದರು.

ಅಪ್ಪು ಜನ್ಮದಿನೋತ್ಸವ ಸಮಾರಂಭದಲ್ಲಿ ಪರ್ಯಾಯ ಕನ್ನಡ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಗರದ ಸಿ.ಪಿ.ಇ.ಡಿ ಗ್ರೌಂಡ್ ನಲ್ಲಿ ಅಪ್ಪು ಅಭಿಮಾನಿ ಬಳಗ ಅಯೋಜಿಸಿದ್ದ ಅಪ್ಪು
ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಚಾಲನೆ ಮಾಡಲಾಯಿತು.

ಪರ್ಯಾಯ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬೆಳಗಾವಿ ಗ್ರಾಮೀಣ
ಕ್ಷೇತ್ರದ ವಿಧಾನಸಭಾ ಸದಸ್ಯೆ ಲಕ್ಷ್ಮೀ ಹೆಬ್ಬಾಳಕರ್ ಬಿಡುಗಡೆಗೊಳಿಸಿ ಮಾತನಾಡಿದ
ಅವರು
ಪುನೀತ್ ರಾಜಕುಮಾರ್ ಅವರ ಸರಳತೆ ಅದರ್ಶ ಹಾಗೂ ಅವರ ಕುಟುಂಬದೊಂದಿಗೆ ಇದ್ದ ಬಾಂಧವ್ಯದ
ಕುರಿತು ಮಾಹಿತಿ ನೀಡಿದರು. ಪರ್ಯಾಯ ಚಿತ್ರ ತಂಡಕ್ಕೆ ಶುಭ ಹಾರೈಸಿದ ಅವರು ಈ
ಚಿತ್ರವು ಉತ್ತಮ ಸಂದೇಶದೊಂದಿಗೆ ಮೂಡಿ ಬರಲಿ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ
ಮಹಾಸ್ವಾಮಿಗಳು ಮಾತನಾಡಿ ಪುನೀತ್ ರಾಜಕುಮಾರ್ ಅವರ ಪರೋಪಕಾರ ಗುಣ ಅನುಕರಣೀಯ ಎಂದರು,
ನಾವು ಮಾಡುವ ಕಾಯಕವನ್ನು ಶ್ರದ್ಧೆಯಿಂದ ಮಾಡಬೇಕು ಎಂದ ಅವರು ಯುವಜನರು ಉತ್ತಮ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. ಪರ್ಯಾಯ ಚಲನಚಿತ್ರ ಸದಭಿರುಚಿಯ ಚಿತ್ರವಾಗಿ ಜನಮನ್ನಣೆ ಗಳಿಸಲಿ ಎಂದರು.
ಚಲನಚಿತ್ರ ನಿರ್ದೇಶಕ ರಮಾನಂದ ಮಿತ್ರ, ಮಮತ ಕ್ರಿಯೇಷನ್ ನ ರಾಜಕುಮಾರ್ ಮತ್ತು ಮುರುಗೇಶ್ ಶಿವಪೂಜಿ ಚಿತ್ರೀಕರಣ ಸಂದರ್ಭದ ಅನುಭವಗಳನ್ನು ಹಂಚಿಕೊಂಡರು.
ಸ್ಥಳೀಯ ಕಲಾವಿದರಾದ ಶಾಂತಾ ಆಚಾರ್ಯ, ವಿಶ್ವನಾಥ ದೇಸಾಯಿ ಮತ್ತು ಅವರ
ತಂಡದವರು ಮತ್ತಿತರ ಪುನೀತ್ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಚಲನಚಿತ್ರಗಳ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನರಂಜಿಸಿದರು. ರಂಜನ್ ರಾಜ್, ಶಿವಾನಂದ ಚಿಕ್ಕಮಠ , ಮತ್ತಿತರರು ಉಪಸ್ಥಿತರಿದ್ದರು. ಸುನೀತಾ ದೇಸಾಯಿ ವಂದಿಸಿದರು.


Jana Jeevala
the authorJana Jeevala

Leave a Reply