ಬೆಳಗಾವಿ DCP ಸ್ನೇಹಾ ಲೋಕಾಯುಕ್ತ SP ಯಾಗಿ ನೇಮಕ..!
ಈಗ ಇವರು ಯಾವ ಜಿಲ್ಲೆಯ SP ಗೋತ್ತಾ..?
ಬೆಳಗಾವಿ : ನಗರದಲ್ಲಿ ಜನಸ್ನೇಹಿ ಡಿಸಿಪಿ ಎಂದೆ ಹೆಸರುವಾಸಿಯಾಗಿದ್ದ ಪೊಲೀಸ್ ಅಧಿಕಾರಿ ಸ್ನೇಹ ಪಿ ವಿ ಅವರು ಇತ್ತೀಚಿಗೆ ಇಲ್ಲಿಂದ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆಗೊಂಡಿದ್ದರು. ಈಗ ಸಂಸ್ಥೆಯವರು ಅವರನ್ನು ರಾಮನಗರ ಲೋಕಾಯುಕ್ತ SP ಸ್ಥಾನಕ್ಕೆ ನಿಯುಕ್ತಿಗೊಳಿಸಿ ಆದೇಶ ಹೋರಡಿಸಿದ್ದಾರೆ.
ಬೆಳಗಾವಿ ನಗರ ಸಂಚಾರ ಮತ್ತು ಅಪರಾಧ ಡಿಸಿಪಿಯಾಗಿ ಸಲ್ಲಿಸಿರುವ ಮೂರು ವರ್ಷ ಸೇವೆಯಲ್ಲಿ ಉತ್ತಮ ಹಾಗೂ ಜನಸ್ನೇಹಿ ಅಧಿಕಾರಿ ಎಂದು ಖ್ಯಾತಿ ಗಳಿಸಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
ಈಗ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆಗೊಂಡಿದ್ದು, ಭ್ರಷ್ಟರ ಬೇಟೆಯಾಡಲು ಮುಂದಾಗಿದ್ದಾರೆ.