ಬೆಳಗಾವಿ :
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೋಡಲ್ ಅಧಿಕಾರಿ ಸಾಮಾಜಿಕ ಕಾರ್ಯಕರ್ತರು, ಕ್ಲಿನಿಕಲ್ ಸೈಕಾಲೋಜಿಸ್ಕ, ಕೃತಕಾಂಗ ಜೋಡನೆ ಅಭಿಂಯತರ ಸ್ಪೀಚ್ಥೆರಪಿಸ್ಟ್ ಆಡಿಯೋಲಾಜಿಸ್ಟ, ಫಿಸಿಯೋ ಥೆರಪಿಸ್ಟ್, ಕೃತಕಾಂಗ ತಾಂತ್ರಿಕರು ಅಕೌಂಟೆಂಟ್ ಕಂ ಕ್ಲರ್ಕ್ ಕಂ ಸ್ಪೋರ ಕಿಪರ್, ಲೆದರ್ವರ್ಕ ಶ್ಯೂ ಮೇಕರ್, ಮೋಬಿಲಿಟಿ ಇನ್ಸ್ಟಕ್ಟರ್, ಇಯರ್ಮೋಲ್ಡ ಟೆಕ್ನಿಶಿಯನ್, ಕಚೇರಿ ಸೇವಕ ಹುದ್ದೆಗಳಿಗೆ ಅರ್ಜಿಗಳನ್ನು ಜು. ೨೮ ೨೦೨೩ ರ ಒಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ,ಬೆಳಗಾವಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಜಿಲ್ಲಾ ಆಸ್ಪತ್ರೆ ಆವರಣ ದೂರವಾಣಿ ಸಂಖ್ಯೆ ೦೮೩೧-೨೪೫೦೦೭೧ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
