ಬೆಳಗಾವಿ :
ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸದಸ್ಯರ ನೇಮಿಸಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹತೆಗಳ : ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಸಮುದಾಯಕ್ಕೊಳಪಟ್ಟಿರಬೇಕು, ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ ೧೫ ವರ್ಷ ವಾಸವಿರಬೇಕು, ಕನಿಷ್ಠ ೩೫ ವರ್ಷದಿಂದ ಗರಿಷ್ಠ ೬೫ ವರ್ಷ ಮಿತಿಯೊಳಗಿರಬೇಕು.
ಕನಿಷ್ಠ ಎಸ್.ಎಸ್.ಎಲ್.ಸಿ ಯವರೆಗೆ ವಿದ್ಯಾಭ್ಯಾಸ ಹೊಂದಿರತಕ್ಕದ್ದು, ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ವಾಸಿಸುವ ಸ್ಥಳ, ಅವರುಗಳ ಆರ್ಥಿಕ/ಸಾಮಾಜಿಕ/ಶೈಕ್ಷಣಿಕ ಸ್ಥಿತಿಗತಿ, ಕೈಗೊಳ್ಳುತ್ತಿರುವ ಉದ್ಯೋಗ ಇತ್ಯಾದಿ ಅಂಕಿ ಅಂಶಗಳ ಮಾಹಿತಿ ತಿಳಿದಿರಬೇಕು.
ಅಲೆಮಾರಿ ಜನಾಂಗದವರಿಗೆ ಇಲಾಖೆಯಿಂದ ಲಭ್ಯವಾಗುತ್ತಿರುವ ಮೀಸಲಾತಿ ಸೌಲಭ್ಯ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ಹೊಂದಿರಬೇಕು ಹಾಗೂ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರಬಾರದು. ದಂಡ/ಜುಲ್ಮಾನೆ/ಶಿಕ್ಷೆ ಅನುಭವಿಸಿರಬಾರದು, ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ನಿವೃತ್ತ ಸರ್ಕಾರಿ/ಅರೆ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಬಹುದು.
ಜೂ.೩೦ ೨೦೨೩ ರೊಳಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಅಥವಾ ಸಂಬಂಧಿಸಿದ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.