ಬೆಳಗಾವಿ : ಖಾನಾಪುರ ತಾಲೂಕ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಹರ ಘರ ತಿರಂಗಾ ಅಭಿಯಾನದ ಪೂರ್ವಭಾವಿ ಸಭೆಯನ್ನು ಖಾನಾಪುರ ಇಸ್ಕಾನ್ ಮಂದಿರದಲ್ಲಿ ಕರೆಯಲಾಗಿತ್ತು. ಸಭೆಯ ಅಧ್ಯಕ್ಷ ಸ್ಥಾನವನ್ನು ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ವಹಿಸಿದ್ದರು. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ ಸ್ವಾಗತಿಸಿದರು. ಖಾನಾಪುರ ತಾಲೂಕು ಪ್ರಭಾರಿ ಮಹೇಶ್ ಮೋಹಿತೆ ಮಾತನಾಡಿ 10 ಆಗಸ್ಟ್ ರಿಂದ 15 ರ ವರೆಗೆ ನಡೆಯುವ ಅಭಿಯಾನದ ಮಾಹಿತಿಯನ್ನು ನೀಡಿದರು. ಶಾಸಕ ವಿಠ್ಠಲ ಹಲಗೇಕರ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಮಾಜಿ ಮಂಡಲ ಅಧ್ಯಕ್ಷ ಸಂಜಯ್ ಕುಬಲ್, ಬಾಬುರಾವ್ ದೇಸಾಯಿ, ಜ್ಯೋತಿಬಾ ರೇಮಾನಿ, ಸುನಿಲ್
ಮದ್ದಿಮನಿ, ಸದಾನಂದ ಪಾಟೀಲ, ಗುಂಡು ತೋಪಿನ್ ಕಟ್ಟಿ, ಚೇತನ್ ಮನೆರಿಕರ್, ಪಂಡಿತ್ ಒಗಳೆ, ಸಯಾಜಿ ಪಾಟೀಲ, ಮೋಹನ ಪಾಟೀಲ, ಕಿಶೋರ್ ಹೆಬ್ಬಾಳಕರ್, ಪ್ರಶಾಂತ್ ರಾಹುಲ್ ಅಳವಣಿ, ಸುನೀತಾ ಪಾಟೀಲ, ಗೋಪಾಲ ಬೇಕಣೆ, ಶಿವರಾಜ್ ಲೋಕೋಳ್ಕರ್, ಸದಾನಂದ ಹೊಸೂರಕರ್, ಪ್ರಕಾಶ್ ದಾವಡೆ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.