ಬೆಳಗಾವಿ: ರೈತರ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ (ರಿ) ದೆಹಲಿ ಸರಕಾರವನ್ನು ಒತ್ತಾಯಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ರವಾನಿಸಿರುವ ಯುವ ಘಟಕದ ಅದ್ಯಕ್ಷ ಕೃಷ್ಣ ಹಿತ್ತಲಮನಿ ಅವರು, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತಕ್ಷಣ ಪ್ರಾರಂಭ ಮಾಡಬೇಕು. ಮೆಕ್ಕೆಜೋಳ ಒಳ್ಳೆಯ ಬೆಳೆ ಬಂದಿದ್ದರಿಂದ ಈ ಸಲ 10 ಲಕ್ಷ ಮೆಟ್ರಿಕ್ ಟನ್ನಗಿಂತ ಹೆಚ್ಚು ರೈತರು ಬೆಳೆದಿದ್ದಾರೆ. ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡಬೇಕು. ರಾಜ್ಯದಲ್ಲಿ ಮತ್ತು ದೇಶದಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆದರೂ ಸಹ ಕೇಂದ್ರ ಸರ್ಕಾರ ರೂ. 70 ಲಕ್ಷ ಮೆಟ್ರಿಕ್ ಟನ್ ಏಕೆ ಆಮದು ಮಾಡಿಕೊಂಡಿದೆ. ಇದರಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಬೆಲೆ ಕುಸಿತ ಕಂಡಿದೆ. ದಯವಿಟ್ಟು ಪತಿ ಕ್ವಿಂಟಲ್ ಗೆ ರೂ. 3000 ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.


