ಬೆಳಗಾವಿ :
ಜೈನರ ಪವಿತ್ರ ಸ್ಥಳ ಸಮ್ಮೇದ ಶಿಖರವನ್ನು ಪ್ರವಾಸಿ ಸ್ಥಳವಾಗಿ ಮಾರ್ಪಡಿಸುವ ಕೇಂದ್ರ ಸರಕಾರದ ಯತ್ನವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಜೈನ ಧರ್ಮದ ಬಾಂಧವರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬಚಾವೋ ಬಚಾವೋ ಸಮ್ಮೇದ್ ಶಿಖರ ಬಚಾವೋ ಎಂದು ಘೋಷಣೆ ಕೂಗಿದರು. ಜೈನರ ಆತ್ಮಾಭಿಮಾನ ಪವಿತ್ರ ಸ್ಥಳ ಸಮ್ಮೇದ್ ಶಿಖರಜೀ ಆಗಿದ್ದು ಆ ಸ್ಥಳವನ್ನು ಸ್ವಾಭಾವಿಕ ಪರಿಶುದ್ಧತೆಯಲ್ಲಿ ಇರಲು ಸುಮ್ಮನೆ ಬಿಟ್ಟು ಬಿಡಬೇಕು ಎಂದು ಆಗ್ರಹಿಸಿದರು.
ಕೇಂದ್ರ & ಝಾರ್ಖಂಡ್ ರಾಜ್ಯ ಸರಕಾರಗಳು ಯಾವುದೇ ಕಾರಣಕ್ಕೂ ಜೈನರ ಶಿಖರ್ಜಿ ಮೇಲೆ ಆಡಳಿತ ಮಾಡಲು ಹೋಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮದ 20 ತೀರ್ಥಂಕರರು ಹಾಗೂ 20ಕೋಟಿ ಜನ ಜೈನರು ಇಲ್ಲಿ ಮೋಕ್ಷ ಪಡೆದಿರುವ ಪವಿತ್ರ ಸ್ಥಳ ಸಮ್ಮೇದ್ ಶಿಖರ ಎಂದರು.
ಮಾಜಿ ಸಚಿವ ಸಂಜಯ ಪಾಟೀಲ ಮಾತನಾಡಿ ಜೈನರಿಗೆ ಹಣಕಾಸಿನ ಕೊರತೆ ಇಲ್ಲ. ಜೈನರ ಪವಿತ್ರ ಸ್ಥಳವನ್ನು ಸರಕಾರ ಅಭಿವೃದ್ಧಿ ಮಾಡುವ ಅವಶ್ಯಕತೆಯೂ ನಮಗೆ ಬೇಕಾಗಿಲ್ಲ ಎಂದು ಕಿವಿಮಾತು ಹೇಳಿದರು.
ಸಮಾಜದ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಸೇರಿ ನಗರದ ಬೋಗಾರವೆಸ್ ನಿಂದ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಡಾ. ನಿತೇಶ ಪಾಟೀಲ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.