ಬೆಳಗಾವಿ : ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಆಯುಕ್ತರು ವಿಶೇಷ ಕಾರ್ಯಾಚರಣೆ ಕೈಕೊಳ್ಳಲು ಆದೇಶಿಸಿದಂತೆ ಎಪಿಎಂಸಿ ಪೊಲೀಸರು ಎನ್ಡಿಪಿಎಸ್ ಪ್ರಕರಣದಲ್ಲಿರುವ ಆರೋಪಿಯಾದ ನಯೀಮ ಅಬ್ಬಾಸ ಕೋಜಾ ಸಾಂಟಿಪ್ಪು ಸುಲ್ತಾನ ನಗರ ಗೋಕಾಕ ಹಾಲಿ ಅಸದಖಾನ ಸೊಸೈಟಿ ಬೆಳಗಾವಿ ಈತನು ಪ್ರಕರಣ ದಾಖಲಾದ ನಂತರ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಸುಮಾರು 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಬೇರೆ ಬೇರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ. ದಿನಾಂಕ:05/10/2024 ರಂದು ಈತ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಗುಪ್ತವಾಗಿ ತಿರುಗಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಪಡೆದು ಎಪಿಎಂಸಿ ಠಾಣೆಯ ವಿಶೇಷ ತಂಡ ಸದರಿ ಆರೋಪಿತನನ್ನು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ಆದೇಶಿಸಿದೆ.
ಪ್ರಕರಣದಲ್ಲಿ ವಿಶೇಷ ಕರ್ತವ್ಯಪ್ರಜ್ಞೆ ತೋರಿದ ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಕಬ್ಬೂರಿ, ಪಿಎಸ್ಐಗಳಾದ ಮಂಜುನಾಥ ಭಜಂತ್ರಿ, ಹಾಗೂ ಸಿಬ್ಬಂದಿಗಳಾದ ಬಿ.ಕೆ. ಮಿಟಗಾರ, ಎನ್.ಎಂ. ದೇಸಾಯಿ, ಬಿ.ಎಂ.ನರಗುಂದ, ಖಾದರ ಖಾನಮ್ಮನವರ, ಗೋವಿಂದ ಪೂಜಾರಿ, ಎನ್ ಡಿ ಬಿರಗೊಂಡರವರನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.