ಬೆಂಗಳೂರು: ಜನಪ್ರಿಯ ನಿರೂಪಕಿ ಅನುಶ್ರೀ ಅವರು ಬಹುಕಾಲದ ಗೆಳೆಯ ರೋಷನ್ ಅವರೊಂದಿಗೆ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಅನುಶ್ರೀ ಅವರ ಮದುವೆಗೆ ಚಂದನವನದ ಅನೇಕ ನಟ-ನಟಿಯರು ಸಾಕ್ಷಿಯಾಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಧನಂಜಯ್, ನವ ದಂಪತಿಗೆ ಶುಭ ಹಾರೈಸಿದ್ದಾರೆ.