ನವದೆಹಲಿ: ಮುಂದಿನ ಎರಡು ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ದಿನಾಂಕ ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ವರದಿ ಪ್ರಕಟವಾಗಿದ್ದು, ಈ ಕ್ಷಣ ದೇಶದಲ್ಲಿ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 358-398 ಸ್ಥಾನದಲ್ಲಿ ಜಯ ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಗಳಿಸಲಿದೆ. ಆದರೆ, ವಿರೋಧ ಪಕ್ಷವಾದ ಕಾಂಗ್ರೆಸ್ ಕಳೆದ ಸಲಕ್ಕಿಂತ ಕಡಿಮೆ ಸ್ಥಾನ ಗೆಲ್ಲಬಹುದು ಎಂದು ಈ ಮಹತ್ವದ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ವಾರದಲ್ಲಿ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳು ಚುನಾವಣಾ ಸಮೀಕ್ಷೆಯನ್ನು ಪ್ರಕಟಿಸುತ್ತೇವೆ. ವಿಶೇಷವಾಗಿ ಕೇಂದ್ರದ ನರೇಂದ್ರ ಮೋದಿ ಬಿಜೆಪಿ ಸರಕಾರ ಮೂರನೇ ಸಲವು ಕೇಂದ್ರದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂದು ಭವಿಷ್ಯ ನುಡಿದಿವೆ.
ಇದೀಗ ಇಟಿಜಿ ಜತೆಗೂಡಿ ಟೈಮ್ಸ್ ನೌ ಸುದ್ದಿ ವಾಹಿನಿ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ 358-398 ಸ್ಥಾನ ಮತ್ತು ಒಕ್ಕೂಟಕ್ಕೆ 110-130, ವೈಎಸ್ ಆರ್ಸಿಪಿ 21-22, ಬಿಜೆಡಿ 10-11, ಇತರರು 11-15 ಸ್ಥಾನ ಗೆಲ್ಲಲಿದೆ ಎಂದು ಪ್ರಕಟವಾಗಿರುವ ವರದಿಯಲ್ಲಿ ತಿಳಿಸಲಾಗಿದೆ.
ಪ್ರಕಟವಾಗಿರುವ ವರದಿ ಅನ್ವಯ ಪಶ್ಚಿಮ ಬಂಗಾಳದಲ್ಲಿ 20 20-24, 30 17-21, 20 0-2, 9 20 29-35, ໖ 2-6, ಎಐಎಡಿಎಂಕೆ 1-3, ಆಂಧ್ರಪ್ರದೇಶ ವೈಎಸ್ಆರ್ ಕಾಂಗ್ರೆಸ್ 21-22, ಟಿಡಿಪಿ-ಜನಸೇನಾ 3-4, ಮಹಾರಾಷ್ಟ್ರ ಎನ್ಡಿಎ 34- 38, ಇಂಡಿಯಾ 9-13, ಮಧ್ಯಪ್ರದೇಶ ಬಿಜೆಪಿ 28-29 ಇಂಡಿಯಾ 0-1, ರಾಜಸ್ಥಾನ ಬಿಜೆಪಿ 20-24, ಇಂಡಿಯಾ 0-1, ಜಾರ್ಖಂಡ್ ಏನ್ ಡಿಎ 12 -14, ಇಂಡಿಯಾ 0-2, ಒಡಿಸ್ಸಾ ಬಿಜೆಡಿ 10- 11, ಬಿಜೆಪಿ 10-11, ಇಂಡಿಯಾ 0-1 ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.