ದೆಹಲಿ :
ಗಾಂಧಿ ಕುಟುಂಬದ ಅತ್ಯಂತ ನಿಷ್ಠಾವಂತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಹುದ್ದೆಗೆ ಹತ್ತಿರವಾಗಿದ್ದಾರೆ. ಅಶೋಕ್ ಗೆಹ್ಲೋಟ್ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಖರ್ಗೆ ಅವರನ್ನು ಕಣಕ್ಕಿಳಿಸಲು ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ನಿರ್ಧರಿಸಿದ್ದರು.
ಆದ್ದರಿಂದ ಇದೀಗ ನಿಜಲಿಂಗಪ್ಪ ಬಳಿಕ ಎಐಸಿಸಿ ಚುಕ್ಕಾಣಿ ಹಿಡಿದ ರಾಜ್ಯದ ಎರಡನೇ ನಾಯಕ ಎಂಬ ಹಿರಿಮೆಗೆ ಖರ್ಗೆ ಪಾತ್ರರಾಗುವ ಸಾಧ್ಯತೆಯಿದೆ.
ಜತೆಗೆ ಬಾಬುಜಗಜೀವನರಾಮ್ ನಂತರ ಈ ಹುದ್ದೆಗೇರುವ ಎರಡನೇ ದಲಿತ ನಾಯಕ ಎಂದೆನಿಸಿಕೊಳ್ಳಲಿದ್ದಾರೆ.