ಶಿವಮೊಗ್ಗ:
ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವನ್ನು ಫೆಬ್ರವರಿ 12ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸೋಮವಾರ ತಿಳಿಸಿದ್ದಾರೆ.
ನಗರದ ನವಲೆ, ಕೃಷಿ ಕಾಲೇಜು ಎದುರು ಚನ್ನಮುಂಬಾಪುರದಲ್ಲಿ ಜಿಲ್ಲಾ ಜಂಗಮ ಸಮಾಜದಿಂದ ನಿರ್ಮಿಸಲಾಗುತ್ತಿರುವ ಜಂಗಮ ಸಮಾಜದ ಸಾಂಸ್ಕೃತಿಕ ಭವನ ಶಿಲಾನ್ಯಾಸ ಹಾಗೂ ಭೂಮಿಪೂಜೆ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಅವರು ಮಾತನಾಡಿದರು.
ವಿಮಾನ ನಿಲ್ದಾಣದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ವಿಮಾನ ಹಾರಾಟಕ್ಕೆ ಎಲ್ಲಾ ರೀತಿಯ ಯೋಜನೆ ರೂಪಿಸಲಾಗಿದೆ. ಮುಂದಿನ ದಿನದಲ್ಲಿ ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.
ಜಂಗಮ ಸಮಾಜ ದೇವರು ಹಾಗೂ ಭಕ್ತರಿಗೆ ಸೇತುವೆಯಾಗಿ ಸಮಾಜ ಕೆಲಸ ಮಾಡುತ್ತಿದೆ. ಜಂಗಮ ಸಮಾಜದ ಸಾಂಸ್ಕೃತಿಕ ಭವನಕ್ಕೆ 1 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಲಾಗಿದೆ. ಶೀಘ್ರವೇ ಕಾಮಗಾರಿ ಮುಗಿಸಿ, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕರುನಾಡಿಗೆ ಮತ್ತೊಂದು ವಿಮಾನ ನಿಲ್ದಾಣ : ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಭಾಗ್ಯ !

Leave a comment
Leave a comment