ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನಿಲ್ಲದ ಟಿಪ್ಪರಗಳ ಅಟ್ಟಹಾಸ..!
ನಿರ್ಲಕ್ಷ್ಯ ಚಾಲನೆಯಿಂದಾಗಿ ಬೆಳo ಬೆಳಿಗ್ಗೆ ಕಬ್ಬಿನ ಟ್ರ್ಯಾಕ್ಟರ್ ಟಿಪ್ಪರ ಮಧ್ಯೆ ಮತ್ತೊಂದು ಅಪಘಾತ..!
ಪೊಲೀಸರ ಸಮ್ಮುಖದಲ್ಲೇ ಟಿಪ್ಪರ್ ಚಾಲಕ, ಮಾಲಿಕರಿಂದ ಗೂಂಡಾಗಿರಿ; ಕಾರ ಚಾಲಕನನ್ನು ಥಳಿಸಿ ಜೀವ ಬೆದರಿಕೆ.
ಕಮಿಷನರ್ ಹಾಕಿದ ನಿಯಮಗಳನ್ನೇ ಗಾಳಿಗೆ ತೂರಿ ಟಿಪ್ಪರ್ ಚಾಲಕರಿಂದ ದುರ್ವರ್ತನೆ..?
ಕಾಂಚನಕ್ಕಾಗಿ ಕಾನೂನು ಮರೆತತ್ರಾ ಕಾಕತಿ ಪೊಲೀಸರು..? ಇವರನ್ನ ತಡೆಯುವರಾರು..?
ಕಮೀಷನರ್ ಭೋರಸೆ ಮೇಲಿದೆ ಕಠಿಣ ಕ್ರಮದ ಭರವಸೆ..!
ಬೆಳಗಾವಿ : ಕಾಕತಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು, ಮಣ್ಣು, ಕಲ್ಲು ಧಂದೆ ನಡೆಸುತ್ತಿರುವ ಟಿಪ್ಪರಗಳ ಅಟ್ಟಹಾಸ ನಿಲ್ಲುವಂತೆ ಕಾಣುತ್ತಿಲ್ಲ. ಯಾಕೆಂದರೆ ಸ್ವತಃ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಕೆಲ ತಿಂಗಳುಗಳ ಹಿಂದೆ ಇವರ ಸೊಕ್ಕಿಗೆ ಬಿಗ್ ಹಾಕುವ ಕೆಲಸ ಮಾಡಿದ್ದರು. ಆದರೆ ಈಗ ಇವರು ಮತ್ತೆ ತಮ್ಮ ಬಾಲ ಬಿಚ್ಚಿದ್ದಾರೆ.
ಇಂದು ಟಿಪ್ಪರ್ ಚಾಲಕನ ನಿರ್ಲಕ್ಷದ ಚಾಲನೆಯಿಂದಾಗಿ ಬೆಳo ಬೆಳಿಗ್ಗೆ ಚಲವೇನಟ್ಟಿ ಹಾಗೂ ಹಂದಿಗನೂರ ಗ್ರಾಮಗಳ ಮಧ್ಯದ ರಾಜ್ಯ ಹೆದ್ದಾರಿ ಮೇಲೆ ಕಬ್ಬಿನ ಟ್ರ್ಯಾಕ್ಟರ್ ಟಿಪ್ಪರ ಮಧ್ಯೆ ಮತ್ತೊಂದು ಅಪಘಾತ ಸಂಭವಿಸಿದೆ. ಸ್ವಲ್ಪದರಲ್ಲೇ ಭೀಕರ ಅಪಘಾತವೊಂದು ತಪ್ಪಿದೆ. ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕ ರಸ್ತೆ ಕೆಳಗಿಳಿದರೂ ವೇಗವಾಗಿ ಬಂದ ಟಿಪ್ಪರ್ ಚಾಲಕ ನಿಯಂತ್ರಣ ತಾಳಲಾರದೆ ಡಿಕ್ಕಿ ಹೊಡೆದಿದ್ದಾನೆ.
ಪೊಲೀಸರ ಸಮ್ಮುಖದ್ಲೇ ಟಿಪ್ಪರ್ ಚಾಲಕ, ಮಾಲಿಕರಿಂದ ಗೂಂಡಾಗಿರಿ; ಕಾರ ಚಾಲಕನನ್ನು ಥಳಿಸಿ ಜೀವ ಬೆದರಿಕೆ.
ಇತ್ತ ಅಪಘಾತ ನಡೆಸಿದ್ದಲ್ಲದೇ ಬುದ್ಧಿವಾದ ಹೇಳಲು ಬಂದ ಕಾರ ಚಾಲಕನನ್ನು ಟಿಪ್ಪರ್ ಚಾಲಕರು ಹಾಗೂ ಮಾಲೀಕರು ಸೇರಿಕೊಂಡು ಪೊಲೀಸರ ಸಮ್ಮುಖದಲ್ಲೇ ಥಳಿಸಿ ಗುಂಡಾವರ್ತಾನೆ ತೋರಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಇತ್ತ ಥಳಿತಕ್ಕೊಳಗಾದ ಕಾರು ಚಾಲಕನನ್ನು ಪೊಲೀಸರು ರಕ್ಷಸಿ ತಮ್ಮ ವಾಹನದಲ್ಲಿ ಠಾಣೆಗೆ ಕರೆದೊಯ್ಯುವಾಗ ಪೊಲೀಸ್ ವಾಹನವನ್ನೇ ಅಡ್ಡಗಟ್ಟಿ ಕಾರು ಸುಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಇದನ್ನು ನೋಡುತ್ತ ಪೊಲೀಸರು ಸುಮ್ಮನಾಗಿದ್ದಾರೆ. ಇದಕ್ಕೆ ಕಾಂಚನ ಪ್ರಭಾವವೇ ಕಾರಣ ಎನ್ನಲಾಗುತ್ತಿದೆ.
ಕಮಿಷನರ್ ಹಾಕಿದ ನಿಯಮಗಳನ್ನೇ ಗಾಳಿಗೆ ತೂರಿ ಟಿಪ್ಪರ್ ಚಾಲಕರಿಂದ ದುರ್ವರ್ತನೆ..?
ಕೆಲ ತಿಂಗಳುಗಳ ಹಿಂದೆ ಟಿಪ್ಪರ್ ಚಾಲಕರ ಅಟ್ಟಹಾಸಕ್ಕೆ ಸಾಕಷ್ಟು ಜೀವಗಳು ಹೋಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಕಮೀಷನರ್ ಭೋರಸೆ ಕಠಿಣ ಕ್ರಮಗಳನ್ನು ಕೈಗೊಂಡು ಇವರ ಅಟ್ಟಹಾಸಕ್ಕೆ ಲಗಾಮು ಹಾಕಿದ್ದರು.ಆದರೆ ಈಗ ಅವರು ಮತ್ತೆ ಸ್ಥಳೀಯ ಆಡಳಿತವನ್ನು ಲಂಚ ನೀಡಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ ಜನ ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇವರನ್ನ ತಡೆಯುವರಾರು..? ಕಾಂಚನಕ್ಕಾಗಿ ಕಾನೂನು ಮರೆತತ್ರಾ ಕಾನೂನು ಕಾಕತಿ ಪೊಲೀಸರು..?
ಈ ದುಷ್ಟರು ಹೀಗೆ ತಮ್ಮ ಚಾಳಿ ಮುಂದುವರೆಸಿದರೆ ಇವರನ್ನು ತಡೆಯುವರಾರು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಯಾಕೆಂದರೆ ಇವರಿಗೆ ಕಾನೂನು ರೀತಿಯಲ್ಲಿ ಪಾಠ ಮಾಡಬೇಕಿದ್ದ ಕಾಕತಿ ಪೊಲೀಸರೇ ಇವರು ಬಿಸಾಡುವ ಕಾಂಚನ ಮುಂದೆ ಮಂಡಿಯೂರಿ ಕಾನೂನು ಮರೆತು ಕೂತಿದ್ದಾರೆ. ಹೀಗಾಗಿ ಇದಕ್ಕೆ ಶಾಶ್ವತ ಪರಿಹಾರದ ಭರವಸೆ ಕಮೀಷನರ್ ಭೋರಸೆ ಅವರಿಂದ ಮಾತ್ರ ಸಾಧ್ಯ ಎನ್ನಲಾಗುತ್ತಿದೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡಬೇಕು.
ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನಿಲ್ಲದ ಟಿಪ್ಪರಗಳ ಅಟ್ಟಹಾಸ..! ಟ್ರ್ಯಾಕ್ಟರ್ ಟಿಪ್ಪರ ಮಧ್ಯೆ ಮತ್ತೊಂದು ಅಪಘಾತ..!


