ಬೆಳಗಾವಿ : ಬೆಳಗಾವಿಯಲ್ಲಿ ಶನಿವಾರವೂ ಧಾರಾಕಾರ ಮಳೆಯಾಗುತ್ತಿದೆ. ಅರ್ಧ ಗಂಟೆ ನಿಂತಿದ್ದ ಮಳೆರಾಯನ ಆರ್ಭಟ ಮತ್ತೆ ಶುರುವಾಗಿ ಶಿವ ಜಯಂತಿ ಮೆರವಣಿಗೆಗೆ ಅಡ್ಡಿ ಉಂಟು ಮಾಡಿದೆ. ಈ ಬಾರಿ ಮಳೆ ಶಿವಾಜಿ ಮೆರವಣಿಗೆ ಪ್ರಿಯರಿಗೆ ನೋವನ್ನುಂಟು ಮಾಡಿತು.
ಮಧ್ಯಾಹ್ನ ಸುರಿದ ಮಳೆಯಿಂದ ಬೆಳಗಾವಿ ಜನ ತುಸು ತೊಂದರೆಗೊಳಗಾಗಬೇಕಾಯಿತು. ಸದಾಶಿವ ನಗರದಲ್ಲಿ ನಾಲ್ಕು ಗಿಡಗಳು ಉರಳಿದ್ದು ಅದನ್ನು ತೆರವುಗೊಳಿಸಲು ಸಂಬಂಧ ಪಟ್ಟವರು ಇನ್ನು ಆಗಮಿಸಿಲ್ಲ ಶುಕ್ರವಾರವೂ ಬೆಳಗಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದೆ. ಸತತವಾಗಿ ಎರಡನೇ ದಿನವೂ ಬೆಳಗಾವಿಯಲ್ಲಿ ಧಾರಾಕಾರ ಮಳೆ ಬಿದ್ದಿದೆ.
ಬೆಳಗಾವಿಯಲ್ಲಿ ಇಂದು ರಾತ್ರಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನದ ನಿಮಿತ್ತ ಬೃಹತ್ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೂ ಮುನ್ನ ಸಂಜೆ ಸುಮಾರಿಗೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ಮಳೆಯ ಆರ್ಭಟಕ್ಕೆ ಮಹಾನಗರದ ಚರಂಡಿಗಳು ತುಂಬಿ ಹರಿದು ರಸ್ತೆ ಮೇಲೆಯೇ ನೀರು ಹರಿದಿದೆ.
ವರದಿ*; ಅಜಯ ಹಂದಿಗುಂದ