ಬೆಳಗಾವಿ :
ಬೆಳಗಾವಿ ಅರ್ಬನ್ ಕೋ – ಆಪರೇಟಿವ್ / ಸೌಹಾರ್ದ ಸಹಕಾರಿ ಬ್ಯಾಂಕರ್ಸ್ಅ ಸೋಸಿಯೇಶನ್ನಿನ ವಾರ್ಷಿಕ ಮಹಾಸಭೆ ಮಂಗಳವಾರ ನಗರದ ಮರಾಠಾ ಕೋ – ಆಪರೇಟಿವ್ ಬ್ಯಾಂಕಿನ ಸಭಾಗೃಹದಲ್ಲಿ ನಡೆಯಿತು.
ಅಧ್ಯಕ್ಷ ಬಾಳಪ್ಪ ಬಿ . ಕಗ್ಗಣಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಪ್ರದೀಪ ಓವುಳಕರ ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ಸಲಹೆಗಾರ ಮಂಜುನಾಥ ಶೇಠ ಅವರು ಸಂಸ್ಥೆಯ ಅಢಾವೆ ಪತ್ರಿಕೆ , ಲಾಭ – ಹಾನಿ ಪತ್ರಿಕೆ ಮತ್ತು ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. 2021-22ನೇ ಸಾಲಿಗಾಗಿ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಐದು ಪಟ್ಟಣ ಸಹಕಾರಿ ಬ್ಯಾಂಕುಗಳಾದ
1) ಶ್ರೀ ಮಹಾಂತ ಶಿವಯೋಗಿ ಸಹಕಾರಿ ಬ್ಯಾಂಕ ಲಿ . , ಮುರಗೋಡ , 2 ) ಶೇಡಬಾಳ ಅರ್ಬನ ಕೋ – ಆಪರೇಟಿವ್ ಬ್ಯಾಂಕ ಲಿ . , ಶೇಡಬಾಳ , 3 ) ದಿ ಪಾಯೊನಿಯರ್ ಅರ್ಬನ್ ಕೋ – ಆಪರೇಟವ್ ಬ್ಯಾಂಕ್ ಲಿಮಿಟೆಡ್ . ಬೆಳಗಾವಿ , 4 ) ಮರಾಠಾ ಆಪರೇಟಿವ್ ಬ್ಯಾಂಕ್ ಲಿ . , ಬೆಳಗಾವಿ , 5 ) ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ ಬೆಲ್ಲದ – ಬಾಗೇವಾಡಿ ಇವುಗಳಿಗೆ ಬೆಳಗಾವಿ ಜಿಲ್ಲಾ ಅತ್ಯುತ್ತಮ ಸಹಕಾರಿ ಬ್ಯಾಂಕ್ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗಾವಿ ಶ್ರೀ ಬಸವೇಶ್ವರ ಕೋ – ಆಪರೇಟಿವ್ ಬ್ಯಾಂಕ್ ಲಿ., ಬೆಳಗಾವಿಯ ನಿರ್ದೇಶಕರು , ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರು ಹಾಗೂ ಅಸೋಸಿಯೇಶನ್ ಅಧ್ಯಕ್ಷ ಬಾಳಪ್ಪ .ಬಿ . ಕಗ್ಗಣಗಿ ಇವರಿಗೆ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಅವರ ವಿಶಿಷ್ಟ ಸೇವಾ ಕೊಡುಗೆಯನ್ನು ಗುರುತಿಸಿ ಅವರಿಗೆ ಬೆಳಗಾವಿ ಜಿಲ್ಲಾ ಸಹಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅದೇ ರೀತಿ ಕರ್ನಾಟಕ ರಾಜ್ಯ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಬೆಳಗಾವಿಯಲ್ಲಿ ಜರುಗಿದ 69 ನೇ ಸಹಕಾರ ಸಪ್ತಾಹ ಆಚರಣೆ ಸಂದರ್ಭದಲ್ಲಿ ಉತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿ ಪುರಸ್ಕೃತರಾದ ರಾಣಿ ಚೆನ್ನಮ್ಮಾ ಮಹಿಳಾ ಕೋ – ಆಪ್ , ಬ್ಯಾಂಕ್ ಲಿ ಮತ್ತು ಮರಾಠಾ ಕೋ – ಆಪ , ಬ್ಯಾಂಕ್ ಲಿ . , ಬ್ಯಾಂಕುಗಳಿಗೆ ಹಾಗೂ ಸಹಕಾರ ರತ್ನ ” ಪ್ರಶಸ್ತಿ ಪುರಸ್ಕೃತರಾದ 1 ) ಶ್ರೀ ಮಲ್ಲಿಕಾರ್ಜುನ .ಡಿ . ಚುನಮರಿ – ಗೋಕಾಕ ಅರ್ಬನ ಕೋ – ಆಪ್ . ಬ್ಯಾಂಕ್ ಲಿ . , ರಾಣಿ ಚನ್ನಮ್ಮಾ ಮಹಿಳಾ ಕೋ – ಆಪ್ , ಬ್ಯಾಂಕ್ ಗೋಕಾಕ , 2 ) ಶ್ರೀಮತಿ ಆಶಾ ಪಿ . ಕೋರೆ ನಿ . , ರಾಣಿ ಚನ್ನಮ್ಮ ಮಹಿಳಾ ಕೋ ಅಪ್ ಬ್ಯಾಂಕ್ , 3 ) ಶ್ರೀ ಕುಮಾರ ಭಾವು ಬದನಿಕಾಯಿ ಜನತಾ ಕೋ – ಆಪ , ಬ್ಯಾಂಕ್ ಲಿ . , ಸದಲಗಾ ಇವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.
ಅಧ್ಯಕ್ಷ ಬಾಳಪ್ಪ ಬಿ.ಕಗ್ಗಣಗಿ , ಗೌರವಾಧ್ಯಕ್ಷ ಎಂ.ಡಿ.ಚುನಮರಿ , ಉಪಾಧ್ಯಕ್ಷ ಬಿ.ಎಸ್.ಕಾಕತಕರ , ಕಾರ್ಯದರ್ಶಿ ಪಿ.ಎಸ್.ಓವುಳಕರ , ಖಜಾಂಚಿ ಎ.ಕೆ.ಮಹಾಜನಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಎಂ.ಎಸ್.ಶೇಠ , ಬಿ.ಎ.ಭೋಜಕರ , ಎಸ್.ಎಸ್.ಪಾಟೀಲ , ಎಸ್.ಎಸ್.ವಾಲಿ , ಆರ್.ಯು.ಬೊಳಮಲ ಮತ್ತು ಸದಸ್ಯ ಬ್ಯಾಂಕುಗಳ ಪದಾಧಿಕಾರಿಗಳು , ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಸಲಹೆಗಾರರಾದ ಬಿ.ಎ.ಭೋಜಗಾರ ವಂದಿಸಿದರು.