ಬೆಂಗಳೂರು : ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 20 ಪ್ರಾಥಮಿಕ ಶಾಲಾ ಶಿಕ್ಷಕರು, ಒಬ್ಬ ವಿಶೇಷ ಶಿಕ್ಷಕರು,11 ಪ್ರೌಢಶಾಲಾ ಶಿಕ್ಷಕರು ಸೇರಿದಂತೆ ಒಟ್ಟು 31 ಶಿಕ್ಷಕರು ಆಯ್ಕೆಯಾಗಿದ್ದಾರೆ.
ಸೆ.5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ. ಮಹಿಳಾ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 25 ಸಾವಿರ ರು.ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ವಿಜೇತ ಪ್ರಾಥಮಿಕ ಶಾಲಾ ಶಿಕ್ಷಕರು: ಚಿಕ್ಕೋಡಿ ಉಳ್ಳಾಗಡ್ಡಿವಾಡಿ ಶಾಲೆಯ ಪದ್ಮಶ್ರೀ ಸುರೇಶ ರೂಗೆ, ಕಲಬುರಗಿಯ ಭೂಸಣಗಿ ಶಾಲೆಯ ಮಲ್ಲಿಕಾರ್ಜುನ ಎಸ್.ಸಿರಸಿಗಿ, ದಾವಣಗೆರೆ ಜಿಲ್ಲೆಯ ಹರಿಹರದ ಬಿ.ಆರುಣ್ ಕುಮಾರ್, ಮೈಸೂರು ಗ್ರಾಮಾಂತರ ಹಿನಕಲ್ ಶಾಲೆಯ ಕೆ.ಎಸ್.ಮಧುಸೂದನ್, ಬೆಳಗಾವಿ ಅಂಬೇವಾಡಿಯ ಆಸ್ಮಾ ಇಸ್ಮಾಯಿಲ್ ನದಾಫ್, ದಕ್ಷಿಣ ಕನ್ನಡ ಮೂಡಬಿದ್ರೆ ನೀರ್ಕೆರೆ ಶಾಲೆಯ ಕೆ.
ಯಮುನಾ, ಹಾವೇರಿ ಬ್ಯಾಡಗಿಯ ಜಮೀರ ಅಬ್ದುಲ್ ಗಫಾರಸಾಬ್ ರಿತ್ತಿ, ಬೆಂಗಳೂರಿನ ಚಂದಾಪುರದ ಜಿ.ರಂಗನಾಥ, ಚಿಕ್ಕಬಳ್ಳಾಪುರ ಇನಮಿಂಚೇನಹಳ್ಳಿ ಯ ಸುಶೀಲಮ್ಮ, ಮಧುಗಿರಿ ಬಸವನಹಳ್ಳಿ ಶಾಲೆಯ ಎಸ್.ವಿ. ರಮೇಶ್, ಧಾರವಾಡ ಇಂಡಿಪಂಪ್ ಶಾಲೆಯ ಹನುಮಪ್ಪ ಎಂ.ಕುಂದರಗಿ, ಚಿತ್ರದುರ್ಗ ಮ್ಯಾಕ್ಯೂರಹಳ್ಳಿಯ ಆರ್.ಟಿ.ಪರಮೇಶ್ವರಪ್ಪ,
ಶಿರಸಿ ಮುಂಡಗೋಡ ಶಾಲೆಯ ರಾಮಚಂದ್ರಪ್ಪ ಶೇಷಾಜಪ್ಪ ಕಲಾಲ, ಶಿವಮೊಗ್ಗದ ಎಂ.ಭಾಗೀರಥಿ ವಿಜಯನಗರ ಹಡಗಲಿಯ ಎಲ್.ಮಧುನಾಯ್ಕ, ರಾಮನಗರ ಅರಳಾಳುಸಂದ್ರ ಕೆಪಿಎಸ್ನ ಪಿ. ಸುರೇಶ, ಯಾದಗಿರಿ ಸುರಪುರದ ನೀಲಪ್ಪ ಎಸ್. ತೆಗ್ಗಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರಾಘವೇಂದ್ರ ಎಸ್.ಮಡಿವಾಳ, ಎಂ.ಎಚ್.ದೊಡ್ಡಬಳ್ಳಾಪುರದ ಮಂಗಳ ಕುಮಾರಿ, ಗದಗ ಬಸಾಪೂರ ರತ್ನಾಬಾಯಿ ಗಿರೋಸಬದಿ,
ಪ್ರಶಸ್ತಿ ಪುರಸ್ಕೃತ ಪ್ರೌಢಶಾಲಾ ಶಿಕ್ಷಕರು :
ಚಿಕ್ಕಮಗಳೂರು ಲೋಕನಾಥಪುರದ ಆರ್.ಡಿ.ರವೀಂದ್ರ, ಬೆಂ.ಗ್ರಾಮಾಂತರ ನೆಲಮಂಗಲದ ಟಿ. ಕೆ. ರವಿಕುಮಾರ, ಉತ್ತರ ಕನ್ನಡ ಜಿಲ್ಲೆ ಕುಮಟಾದ ಮಹಾದೇವ ಬೊಮ್ಮುಗೌಡ, ಶಿವಮೊಗ್ಗ ತೀರ್ಥಹಳ್ಳಿ ಟಿ.ವೀರೇಶ, ಧಾರವಾಡ ಹುಬ್ಬಳ್ಳಿಯ ಕಳಕಮಲ್ಲೇಶ ಪಟ್ಟಣಶೆಟ್ಟಿ, ಬೆಂ.ಉತ್ತರ ನೆಲಗದರನಹಳ್ಳಿ ಎಸ್.ಶ್ಯಾಮಲ, ಉಡುಪಿ ರೆಂಜಾಳದ ವಿನಾಯಕ ನಾಯ್ಕ, ಬೆಂ. ದಕ್ಷಿಣ ಕೋನಪ್ಪನ ಅಗ್ರಹಾರ ಸಿ.ಪದ್ಮಾವತಿ, ವಿಜಯಪುರ ಭಾರತ ಶಶಿಕಲಾ ಲಕ್ಷ್ಮಣ ಬಡಿಗೇರ, ಚಿಕ್ಕಬಳ್ಳಾಪುರ ಹಂಪಸಂದ್ರದ ಹರೀಶ್ ರಾಜ ಆರಸ್ ಮತ್ತು ದಕ್ಷಿಣ ಕನ್ನಡ ಬೆಳ್ತಂಗಡಿ ವಿಶೇಷ ಶಿಕ್ಷಕ ಕೆ.ವಿಶ್ವನಾಥ ಗೌಡ.