ದೆಹಲಿ:
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ.
2023ನೇ ಸಾಲಿನ ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಹಲವರಿಗೆ ಆಯ್ಕೆ ಮಾಡಲಾಗಿದೆ. ಸಾಧಕರಿಗೆ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸದ್ಯಕ್ಕೆ 26 ಮಂದಿಯ ಹೆಸರನ್ನು ಘೋಷಣೆ ಮಾಡಲಾಗಿದೆ. ರಾಜ್ಯದ ರಾಣಿ ಮಾಚಯ್ಯ ಹಾಗೂ ತಮಟೆಯ ತಂದೆ ಎಂದು ಪ್ರಖ್ಯಾತರಾದ ಮುನಿ ವೆಂಕಟಪ್ಪ ಅವರಿಗೆ ಪದ್ಮಶ್ರೀ ನೀಡಲಾಗಿದೆ.
ಒಆರ್ಎಸ್ನ ಹರಿಕಾರ ಡಾ. ದಿಲೀಪ್ ಮಹಾಲನಬಿಸ್ಗೆ ಪದ್ಮವಿಭೂಷಣ ಗೌರವ ನೀಡಲಾಗಿದ್ದರೆ, ಇತರ 25 ಮಂದಿಗೆ ಪದ್ಮಶ್ರಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಒಆರ್ಎಸ್ ಪ್ರವರ್ತಕ ದಿಲೀಪ್ ಮಹಾಲನಬಿಸ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ (ಪೀಡಿಯಾಟ್ರಿಕ್ಸ್) ಪದ್ಮವಿಭೂಷಣ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ವೀಕಾರ ಮಾಡಲಿದ್ದಾರೆ. ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ವ್ಯಕ್ತಿಗಳಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯ, ಕಲೆಯ (ಜಾನಪದ ನೃತ್ಯ) ನರ್ತಕಿ ಈ ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಉಳಿಸಲು ಸಹಾಯ ಮಾಡಿದ ರಾಣಿ ಮಾಚಯ್ಯ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾನಪದ ಸಂಗೀತ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರದ ಮುನಿವೆಂಕಟಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
74 ನೇ ಗಣರಾಜ್ಯೋತ್ಸವದ ಮೊದಲು, ಕೇಂದ್ರವು ಬುಧವಾರದಂದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಸ್ವೀಕರಿಸುವವರನ್ನು ಘೋಷಿಸಿತು. 26 ಪದ್ಮ ಪ್ರಶಸ್ತಿಗಳು-1 ಪದ್ಮ ವಿಭೂಷಣ ಮತ್ತು 25 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.
ದಿಲೀಪ್ ಮಹಾಲನಬಿಸ್ ಅವರು ಪದ್ಮವಿಭೂಷಣವನ್ನು ಸ್ವೀಕರಿಸಲಿದ್ದಾರೆ. ಇತರ 25 ಪುರಸ್ಕೃತರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗುವುದು.
ಪದ್ಮವಿಭೂಷಣ
ದಿಲೀಪ್ ಮಹಲನಾಬಿಸ್
ಪದ್ಮಶ್ರೀ
ರತನ್ ಚಂದ್ರ ಕರ್
ಹೀರಾಬಾಯಿ ಲೋಬಿ
ಮುನೀಶ್ವರ್ ಚಂದರ್ ದಾವರ್
ರಾಮ್ಕುಯಿವಾಂಗ್ಬೆ ನ್ಯೂಮ್
ವಿ ಪಿ ಅಪ್ಪುಕುಟ್ಟನ್ ಪೊದುವಾಲ್
ಎಸ್. ಚಂದ್ರಶೇಖರ್
ವಡಿವೇಲ್ ಗೋಪಾಲ್ ಮತ್ತು ಮಾಸಿ ಸದಯ್ಯನ್
ತುಲಾ ರಾಮ್ ಉಪ್ರೇತಿ
ನೆಕ್ರಮ್ ಶರ್ಮಾ
ಜನುಮ್ ಸಿಂಗ್ ಸೋಯ್
ಧನಿರಾಮ್ ಟೊಟೊ
ಬಿ ರಾಮಕೃಷ್ಣ ರೆಡ್ಡಿ
ಅಜಯ್ ಕುಮಾರ್ ಮಾಂಡವಿ
ರಾಣಿ ಮಾಚಯ್ಯ
ಕೆ ಸಿ ರನ್ನರಸಂಗಿ
ರೈಸಿಂಗ್ಬೋರ್ ಕುರ್ಕಲಾಂಗ್
ಮಂಗಳಾ ಕಾಂತಿ ರಾಯ್
ಮೋವಾ ಸುಬಾಂಗ್
ಮುನಿವೆಂಕಟಪ್ಪ
ದೋಮರ್ ಸಿಂಗ್ ಕುನ್ವರ್
ಪರಶುರಾಮ ಕೊಮಾಜಿ ಖುನೆ
ಗುಲಾಮ್ ಮುಹಮ್ಮದ್ ಝಾಝ್
ಭಾನುಭಾಯಿ ಚಿತಾರಾ
ಪರೇಶ್ ರಾತ್ವಾ
ಕಪಿಲ್ ದೇವ್ ಪ್ರಸಾದ್